ಭಾರತೀಯ ಸ್ಕೇಟಿಂಗ್ ತಂಡಕ್ಕೆ ಮೌಂಟ್ ಕಾರ್ಮಲ್ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವರ್ಷಿಣಿ ಅಪರ್ಣ ಆಯ್ಕೆಯಾಗಿದ್ದಾರೆ. ಜುಲೈ19ರಿಂದ 30ರವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ ಶಿಪ್ ಮತ್ತು ಸೆ,13ರಿಂದ 21ರವರೆಗೆ ಚೀನಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ರಾಘವೇಂದ್ರ ಜಿ.ವಿ.ಮತ್ತು ಆನಂದ್ ಅವರ ಮಾರ್ಗದರ್ಶನದಲ್ಲಿ ಬೆಸ್ಟ್ ಕ್ಲಬ್ ಸ್ಕೇಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.