ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಜಿಲ್ಲಾ ಹಾಲು ಒಕ್ಕೂಟದಿಂದ ನಗರದ ಜಿಲ್ಲಾ ಅಸ್ಪತ್ರೆಯಲ್ಲಿರುವ ಹೆರಿಗೆ ವಾರ್ಡಿನಲ್ಲಿರುವ ಬಾಣಂತಿಯರು, ಗರ್ಭೀಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಡ್ ಲೈಫ್ ಹಾಲು ಮತ್ತು ಸುವಾಸಿತ ಹಾಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಶಿವಕುಮಾರ್, ಸಹಾಯಕ ವ್ಯವಸ್ಥಾಪಕ ಸೈಯದ್ ಮನ್ಸೂರ್‍ವುಲ್ಲಾ, ಮಾರುಕಟ್ಟೆ ಅಧಿಕಾರಿ ರಾಘವೇಂದ್ರರಾವ್, ವಿಭಾಗದ ನೂತನ್, ಸಂತೋಷ್, ಕ್ಷೀರ ಕೇಂದ್ರದ ಅಧಿಕೃತ ಮಾರಾಟಗಾರರು ಭಾಗವಹಿಸಿದ್ದರು.