
ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನಿಂದನೀಯ ಪದ ಬಳಕೆ ಮಾಡಿದ ಬಿಜೆಪಿ ಮುಖಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕಲಬುರಗಿ ನಾಗರಿಕ ಹೋರಾಟ ಸಮಿತಿ ಇಂದು ಕರೆ ನೀಡಿದ್ದ ಬೃಹತ್ ಪ್ರತಿಭಟನೆಗೆ ಪ್ರಿಯಾಂಕ್ ಖರ್ಗೆ ವಿಕಲಚೇತನ ಅಭಿಮಾನಿಗಳ ಬಳಗದ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಅಂಬಾಜಿ ಪಿ.ಮೇಟಿ, ಖಾಸಿಂಸಾಬ್ ಡೊಂಗರಗಾಂವ್, ನಾನಾಗೌಡ ಹೊನ್ನಳ್ಳಿ, ಶರಣು ಹತ್ತರಕಿ, ನಾಗರಾಜ ನಂದೂರ್ ಹಾಗೂ ಶಿವಶರಣ ರಟಕಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.