ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ ಶುಕ್ರವಾರದಂದು, ವಿವಿಯ ಎಮ್. ಎ., ಎಮ್. ಎಸ್‍ಸಿ. (ಯೋಗಾ) ಹಾಗೂ ಬಿಲ್ವಾ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಪ್ರಾಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ವಿವಿಯ ಕುಲಸಚಿವ ಡಾ. ಎಸ್. ಜಿ. ಡೊಳ್ಳೆಗೌಡರ್ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಡಾ. ಶಿವಕುಮಾರ ಜವಳಿಗಿ, ಡಾ. ಶರಣಬಸಪ್ಪ ಪಾಟೀಲ, ಪ್ರೊ. ಕಲ್ಯಾಣರಾವ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.