
ಹನೂರು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಎಸ್ ಅನಿಲ್ ಕುಮಾರ್ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕಿ ಪುಷ್ಪಲತಾ ಶಿವಮಲ್ಲು ಅವರು ಆಯ್ಕೆಯಾಗಿದ್ದಾರೆ. ಈ ವೇಳೆ ನೂತನ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷ ಪುಷ್ಪಲತಾ, ನಿರ್ದೇಶಕರುಗಳಾದ ಶ್ರೀನಿವಾಸ್ ಗೌಡ, ಕೆಂಚನಾಯ್ಕ, ನಾಗರತ್ನಮ್ಮ, ಪಟ್ಟಣ ಪಂ. ಸದಸ್ಯರಾದ ಗಿರೀಶ್, ಹರೀಶ್, ನವೀನ್, ಮಾಜಿ ಸದಸ್ಯ ಬಸವರಾಜು,ತಾಪಂ ಮಾಜಿ ಅಧ್ಯಕ್ಷ ವೆಂಕಟರಮಣ ನಾಯ್ಡು, ಮುಖಂಡರಾದ ನಾಗೇಂದ್ರ, ರಮೇಶ್ ನಾಯ್ಡು, ರವೀಂದ್ರ, ಪ್ರದೀಪ್ ಕುಮಾರ್, ಮಾದೇಶ್, ರವಿ, ಲಿಂಗಶೆಟ್ಟಿ, ವೆಂಕಟೇಶ್, ರಾಜು, ರಾಜೇಶ್, ಚೇತನ್ ದೊರೆರಾಜು, ಮಲ್ಲು, ಮರಿಗೌಡ, ಶಿವಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.