
SMS ಮೂಲಕ ಸುರಕ್ಷಿತವಾದ ಹಣಕಾಸಿನ ವಹಿವಾಟುಗಳು ಸೇರಿದಂತೆ ಹಲವಾರು ಸೇವೆಗಳನ್ನು ಆಕ್ಸೆಸ್ ಮಾಡಲು ಸ್ಮಾರ್ಟ್‌ಫೋನ್ ಮತ್ತು ಸಿಮ್ ಕಾರ್ಡ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಇದು ಸಿಮ್ ಟೇಕ್ಓವರ್ ವಂಚನೆಗೆ ಗುರಿಯಾಗಬಹುದಾದ ಅಪಾಯವನ್ನುಂಟುಮಾಡುತ್ತದೆ. ಈ ವಂಚನೆಯಲ್ಲಿ ನಿಮ್ಮ ಸಾಧನಕ್ಕೆ ಫಿಸಿಕಲ್ ಆಕ್ಸೆಸ್ ಅಗತ್ಯವಿಲ್ಲದೆಯೇ ನಿಮ್ಮ ಫೋನ್ ಸಂಖ್ಯೆಯನ್ನು ವಂಚಕರ ಸಿಮ್‌ಗೆ ವರ್ಗಾಯಿಸಲು ಮೊಬೈಲ್ ಕ್ಯಾರಿಯರ್‌ಗಳನ್ನು ಕುಶಲತೆಯಿಂದ ನಿರ್ವಹಿಸಲಾಗುತ್ತದೆ. ಫಿಶಿಂಗ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆದು ಮತ್ತು ಕಳೆದುಹೋದ ಸಿಮ್ ಅನ್ನು ತಪ್ಪಾಗಿ ವರದಿ ಮಾಡುವ ಮೂಲಕ, ಸ್ಕ್ಯಾಮರ್‌ಗಳು ನಿಮ್ಮ ಸಂಖ್ಯೆಯನ್ನು ಪೋರ್ಟ್ ಮಾಡಲು ಕ್ಯಾರಿಯರ್‌ನ ಮನವೊಲಿಸುತ್ತಾರೆ. ಇದು ನಿಮ್ಮ ಕರೆಗಳು, ಸಂದೇಶಗಳು ಮತ್ತು ಮುಖ್ಯವಾಗಿ, ಬ್ಯಾಂಕಿಂಗ್ ಮತ್ತು ಪಾವತಿ ಆ್ಯಪ್‌ಗಳಿಗೆ ಪರಿಶೀಲನಾ ಕೋಡ್‌ಗಳಿಗೆ ಆಕ್ಸೆಸ್ ನೀಡುತ್ತದೆ. ಇದರಿಂದ ಸಂಭಾವ್ಯ ಆರ್ಥಿಕ ನಷ್ಟಗಳು ಉಂಟಾಗಬಹುದು.
ಸಿಮ್ ಟೇಕ್ಓವರ್ ವಂಚನೆಯ ಪರಿಣಾಮ ತೀವ್ರವಾಗಿರಬಹುದು. ವಂಚಕರು ಬಲಿಪಶುವಿನ ಫೋನ್ ಸಂಖ್ಯೆಯನ್ನು ಒಮ್ಮೆ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ, ಅವರು 2FA ನಂತಹ ಭದ್ರತಾ ವೈಶಿಷ್ಟ್ಯಗಳನ್ನು ಬೈಪಾಸ್ ಮಾಡಬಹುದಲ್ಲದೇ, ಹಣಕಾಸು ಖಾತೆಗಳು, ಇಮೇಲ್, ಸಾಮಾಜಿಕ ಮಾಧ್ಯಮ ಮತ್ತು ಇತರ ಪ್ರಮುಖ ಸೇವೆಗಳಂತಹ ಸೂಕ್ಷ್ಮ ಮಾಹಿತಿಗೆ ಆಕ್ಸೆಸ್ ಪಡೆಯಬಹುದು. ಅಲ್ಲದೇ, ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡಬಹುದು ಅಥವಾ ಬಲಿಪಶುವಿನ ಫೋನ್ ಸಂಖ್ಯೆಗೆ ಸಂಬಂಧಿಸಿದ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಂತಹ ಅನಧಿಕೃತ ಹಣಕಾಸಿನ ವಹಿವಾಟುಗಳನ್ನು ನಡೆಸಬಹುದು. ವಂಚಕರು ಕರೆಗಳು ಮತ್ತು ಸಂದೇಶಗಳನ್ನು ಪ್ರತಿಬಂಧಿಸಿ ಅಥವಾ ಐಡೆಂಟಿಟಿ ಥೆಫ್ಟ್‌ಗಾಗಿ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ಗೌಪ್ಯತೆಯನ್ನು ಉಲ್ಲಂಘಿಸಬಹುದು.
ಸಿಮ್ ಟೇಕ್ಓವರ್ ವಂಚನೆಗೆ ಸಂಬಂಧಿಸಿದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಮೊಬೈಲ್ ಸಿಮ್ ಅನ್ನು ಸುರಕ್ಷಿತವಾಗಿಡಲು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಅಂತಹ ವಂಚನೆಗಳಿಗೆ ಬಲಿಯಾಗದಂತೆ ಗ್ರಾಹಕರನ್ನು ರಕ್ಷಿಸಲು PhonePe ಯ ಸೈಬರ್ ಸುರಕ್ಷತಾ ತಜ್ಞರ ಕೆಲವು ಸಲಹೆಗಳು ಇಂತಿವೆ. ನಿಮ್ಮ ಪೂರೈಕೆದಾರರು ನೀಡುವ ಕಠಿಣ ಸಿಮ್ ಪಿನ್/ಪಾಸ್‌ವರ್ಡ್ ಅನ್ನು ಸಕ್ರಿಯಗೊಳಿಸಿ. ಅನಪೇಕ್ಷಿತ ಸಂವಹನಗಳ ಮೂಲಕ ಸಿಮ್ ವಿವರಗಳು ಅಥವಾ ಪಾಸ್‌ವರ್ಡ್‌ಗಳಂತಹ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳದಂತೆ ಎಚ್ಚರ ವಹಿಸಿ. ಲಭ್ಯವಿರುವಲ್ಲಿ SMS ಹೊರತಾಗಿ ಮಲ್ಟಿ-ಫಾಕ್ಟರ್ ಆಥೆಂಟಿಕೇಟರ್ ವಿಧಾನಗಳಿಗೆ ಆದ್ಯತೆ ನೀಡಿ ಮತ್ತು ಸಿಗ್ನಲ್ ನಷ್ಟ ಅಥವಾ ಅನಿರೀಕ್ಷಿತ ಕೋಡ್‌ಗಳಂತಹ ಯಾವುದೇ ವೈಪರೀತ್ಯಗಳಾದಲ್ಲಿ ನಿಮ್ಮ ಮೊಬೈಲ್ ಬಳಕೆಯ ಮೇಲೆ ಎಚ್ಚರ ವಹಿಸಿ. ಅನುಮಾನಾಸ್ಪದ ಚಟುವಟಿಕೆಯನ್ನು ನಿಮ್ಮ ಪೂರೈಕೆದಾರರಿಗೆ ಕೂಡಲೇ ವರದಿ ಮಾಡಿ ಮತ್ತು ಅನಧಿಕೃತ ವಹಿವಾಟುಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಹಣಕಾಸು ಸಂಸ್ಥೆಗಳಿಂದ ಅಕೌಂಟ್ ಅಲರ್ಟ್ ಬಳಸಿಕೊಳ್ಳಿ.
ಇಂದಿನ ದಿನಗಳಲ್ಲಿ ಮೊಬೈಲ್ ಮೇಲಿನ ಅವಲಂಬನೆ ಹೆಚ್ಚಾದಂತೆ, ಸಿಮ್ ಟೇಕ್ಓವರ್ ವಂಚನೆ ದೊಡ್ಡ ಅಪಾಯವಾಗಿ ಎದುರಾಗಿದೆ. ನಿಮ್ಮ ವೈಯಕ್ತಿಕ ಡೇಟಾ ಮತ್ತು ಆರ್ಥಿಕ ಯೋಗಕ್ಷೇಮಕ್ಕೆ ಧಕ್ಕೆ ತರುವ ಗುರಿಯೊಂದಿಗೆ ವಂಚಕರು ನಿರಂತರವಾಗಿ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ದುರ್ಬಲತೆಗಳನ್ನು ಹುಡುಕುತ್ತಾರೆ. ಆದರೆ ಚಿಂತಿಸಬೇಡಿ: ಜಾಗರೂಕರಾಗಿ, ಭದ್ರತೆಯನ್ನು ಪಾಲಿಸುವುದರ ಜೊತೆಗೆ ನಮ್ಮ ಸಲಹೆಗಳನ್ನು ಅನುಸರಿಸುವ ಮೂಲಕ, ಈ ರೀತಿಯ ವಂಚನೆಗೆ ಬಲಿಯಾಗುವ ಸಾಧ್ಯತೆಯನ್ನು ನೀವು ಗಮನಾರ್ಹವಾಗಿ ಕಡಿಮೆ ಮಾಡಬಹುದು. ನೆನಪಿಡಿ, ತಡೆಗಟ್ಟುವ ಕ್ರಮಗಳನ್ನು ಸಕ್ರಿಯವಾಗಿ ತೆಗೆದುಕೊಳ್ಳುವುದು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಸೂಕ್ಷ್ಮ ಮಾಹಿತಿಯನ್ನು ರಕ್ಷಿಸುವಲ್ಲಿ ಎರಡು ಮಾತಿಲ್ಲ. ಅರಿತುಕೊಂಡು, ಸುರಕ್ಷಿತವಾಗಿರುವುದರ ಜೊತೆಗೆ ನಿಮ್ಮ ಮೊಬೈಲ್ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ನಾವು ಕೈಜೋಡಿಸಿ ಒಟ್ಟಾಗಿ ಕೆಲಸ ಮಾಡೋಣ.
PhonePe ನಲ್ಲಿ ನೀವು ಇಂತಹ ವಂಚನೆಗೆ ಗುರಿಯಾಗಿದ್ದರೆ, ನೀವು ಅಂತಹ ವಂಚನೆಗಳನ್ನು PhonePe ಆ್ಯಪ್‌ನಲ್ಲಿ ಅಥವಾ ಗ್ರಾಹಕ ಸೇವಾ ಸಂಖ್ಯೆ 080–68727374 / 022–68727374 ಗೆ ಕರೆ ಮಾಡುವ ಮೂಲಕ ಅಥವಾ PhonePe ಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ತಕ್ಷಣ ವರದಿ ಮಾಡಬಹುದು. ಇದಲ್ಲದೆ, ನೀವು ವಂಚನೆ ದೂರುಗಳನ್ನು ಹತ್ತಿರದ ಸೈಬರ್ ಕ್ರೈಮ್ ಸೆಲ್‌ಗೆ ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್‌ನಲ್ಲಿ ದೂರು ನೋಂದಾಯಿಸಬಹುದು ಅಥವಾ 1930 ರಲ್ಲಿ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp ವಂಚನೆಯನ್ನು ವರದಿ ಮಾಡುವ ಮೂಲಕ ನೀವು ದೂರಸಂಪರ್ಕ ಇಲಾಖೆಯನ್ನು (DOT) ಸಹ ಸಂಪರ್ಕಿಸಬಹುದು. ನೀವು PhonePe ದೂರು ಪೋರ್ಟಲ್‌ನಲ್ಲಿಯೂ ದೂರು ಸಲ್ಲಿಸಬಹುದು.