
ಕಲಬುರಗಿ: ಜಿಲ್ಲಾ ಆಡಳಿತ ಮತ್ತು ಜಿ.ಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಿದ್ವಾಯಿ ಆಸ್ಪತ್ರೆ, ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘ, ಜಿಲ್ಲಾ ಸ್ತ್ರೀರೋಗ ತಜ್ಞರ ಸಂಘ ಮತ್ತು ನಾಲ್ಕಚಕ್ರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಅಪ್ಪ ಪಬ್ಲಿಕ್ ಶಾಲೆಯ ಶತಮಾನೋತ್ಸವ ಭವನದಲ್ಲಿ ಇಂದು ಕ್ಯಾನ್ಸರ್ ಅರಿವು ಉಪನ್ಯಾಸ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಡಿಹೆಚ್‍ಒ ಡಾ.ಶರಣಬಸಪ್ಪ ಕ್ಯಾತನಾಳ್, ನಂದಿನಿ ಸುರೇಂದ್ರ ಸನಬಾಲ್, ಡಾ.ರವಿಕಾಂತಿ ಕ್ಯಾತನಾಳ, ಸವಿತಾ ನಾಸಿ, ಡಾ.ಗುರುರಾಜ ದೇಶಪಾಂಡೆ, ಡಾ.ಕಾವೇರಿ, ಡಾ.ಸುಮಯ್ಯ ಸನಾ, ಡಾ.ಮಹಾನಂದಾ ಮೇಳಕುಂದಿ, ಮಾಲಾ ಕಣ್ಣಿ ಸೇರಿದಂತೆ ಮತ್ತಿತರರು ಇದ್ದರು.