
ಬೆಂಗಳೂರು,ಜೂ24: ನೋವಾ ಕಂಟ್ರೋಲ್ ಟೆಕ್ನಾಲಜಿಕ್ಸ್ ಮುಂದಿನ ಕೆಲ ವರ್ಷಗಳು ಮುಂದಿನ ತಲೆಮಾರಿನ ರೈಲ್ವೆ ಸುರಕ್ಷತಾ ವ್ಯವಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ 100 ಕೋಟಿ ಮೀರಿ ಹೂಡಿಕೆ ಮಾಡಲಿದ್ದು ಇದು ರೈಲ್ವೆ ಸಿಗ್ನಲಿಂಗ್, ಟ್ರೈನ್ ಪೆÇ್ರಟೆಕ್ಷನ್ ಅಂಡ್ ಆಪರೇಷನಲ್ ಟೆಕ್ನಾಲಜಿ (ಒಟಿ)- ಸೈಬರ್ ಸೆಕ್ಯುರಿಟಿಯಲ್ಲಿ ಸ್ಥಳೀಯ ಸಾಮಥ್ರ್ಯಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿದೆ.
ಉದ್ಯಮದ ತಜ್ಞರು ಇತ್ತೀಚೆಗೆ ಸಮಾರೋಪಗೊಂಡ ಐ.ಆರ್.ಎಸ್.ಇ. ಕನ್ವೆನ್ಷನ್ ಅಂಡ್ ಎಕ್ಸಿಬಿಷನ್ 2026ರಲ್ಲಿ ರೈಲ್ವೆ ಸುರಕ್ಷತಾ ವ್ಯವಸ್ಥೆಗೆ ಒಟಿ ಸೈಬರ್ ಸೆಕ್ಯುರಿಟಿಯನ್ನು ಅಳವಡಿಸುವ ವೃದ್ಧಿಸುತ್ತಿರುವ ಅಗತ್ಯವನ್ನು ಎತ್ತಿ ತೋರಿಸಿದ್ದು ಇದರೊಂದಿಗೆ ಸಿಗ್ನಲಿಂಗ್,ರೈಲು ರಕ್ಷಣೆ ಮತ್ತು ಸಂವಹನ ವ್ಯವಸ್ಥೆಗಳು ಒಳಗೊಂಡಿವೆ.ರೈಲ್ವೆ ಸುರಕ್ಷತೆಯು ಮೂಲಭೂತ ಪರಿವರ್ತನೆಗೆ ಒಳಗಾಗುತ್ತಿದೆ. ಕವಚ್ ನಂತಹ ತಂತ್ರಜ್ಞಾನಗಳು ರೈಲು ರಕ್ಷಣಾ ಸಾಮಥ್ರ್ಯಗಳನ್ನು ಗಮನಾರ್ಹವಾಗಿ ಸದೃಢಗೊಳಿಸಿದ್ದು ಸಿಗ್ನಲಿಂಗ್, ರೈಲು ನಿಯಂತ್ರಣ ಮತ್ತು ಕಾರ್ಯಾಚರಣೆಗಳ ವ್ಯವಸ್ಥೆಗಳ ಡಿಜಿಟಲೀಕರಣವು ಉದ್ಯಮಕ್ಕೆ ಹೊಸ ಅವಶ್ಯಕತೆಯನ್ನು ಸೃಷ್ಟಿಸಿದೆ'' ಎಂದು ನೋವಾ ಕಂಟ್ರೋಲ್ ಟೆಕ್ನಾಲಜೀಸ್ ಸಿಇಒ ಸೌರಜಿತ್ ಮುಖರ್ಜೀ ಹೇಳಿದರು. ಸೈಬರ್ ಭದ್ರತೆಯನ್ನು ಸ್ವತಂತ್ರ ಐಟಿ ಕಾರ್ಯವೆಂದು ನೋಡಲಾಗುವುದಿಲ್ಲ. ಅದನ್ನು ರೈಲ್ವೆ ಕಾರ್ಯಾಚರಣೆಗಳ ಸಮಗ್ರತೆ, ವಿಶ್ವಾಸಾರ್ಹತೆ ಮತ್ತು ಸದೃಢತೆಯನ್ನು ತರುವ ಸುರಕ್ಷತೆಯ ಪದರವನ್ನಾಗಿ ನೋಡಬೇಕಾಗುತ್ತದೆ. ರೈಲು ಜಾಲಗಳು ಹೆಚ್ಚು ಸಂಪರ್ಕಿತ ಮತ್ತು ಡೇಟಾ-ಪ್ರೇರಿತವಾದಂತೆ ಭವಿಷ್ಯವು ಸುರಕ್ಷತೆ, ಸಿಗ್ನಲಿಂಗ್ ಮತ್ತು ಸೈಬರ್ ಭದ್ರತೆ ಒಟ್ಟಿಗೆ ಏಕೀಕೃತ ಚೌಕಟ್ಟಿನಲ್ಲಿ ಕೆಲಸ ಮಾಡುವ ಸದೃಢ ರೈಲ್ವೆ ಇಕೊಸಿಸ್ಟಂಗಳ ನಿರ್ಮಾಣದಲ್ಲಿ ಭವಿಷ್ಯವಿದೆ” ಎಂದರು.
ಕಂಪನಿಯ ಪ್ರಕಾರ ಯೋಜಿತ ಹೂಡಿಕೆಯನ್ನು ಸದೃಢ ಆಂತರಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಾಮಥ್ರ್ಯಗಳಿಗೆ ಹಾಗೂ ರೈಲ್ವೆ ಸುರಕ್ಷತೆ, ಸಿಗ್ನಲಿಂಗ್, ಸೈಬರ್ ಭದ್ರತೆ ಮತ್ತು ಡಿಜಿಟಲ್ ರೈಲ್ವೆ ತಂತ್ರಜ್ಞಾನಗಳಲ್ಲಿ ವಿನಿಯೋಗಿಸಲಾಗುತ್ತದೆ ಕಂಪನಿಯ ದೀರ್ಘಾವಧಿ ಕಾರ್ಯತಂತ್ರ ಕುರಿತು ಇ2ಇ ರೈಲ್ ಪ್ರವರ್ತಕ ಅಧ್ಯಕ್ಷ ವಿನಯ್ ರಾವ್, “ಭಾರತಕ್ಕೆ ರೈಲ್ವೆ ಸುರಕ್ಷತೆಯ ತಂತ್ರಜ್ಞಾನಗಳಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ವಿಶಿಷ್ಟ ಅವಕಾಶವಿದೆ. ಮುಂದಿನ ಕೆಲ ವರ್ಷಗಳಲ್ಲಿ ನೋವಾ ಮುಂದಿನ ತಲೆಮಾರಿನ ರೈಲ್ವೆ ಸುರಕ್ಷತೆಯ ವ್ಯವಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ 100 ಕೋಟಿ ಮೀರಿ ಹೂಡಿಕೆ ಮಾಡಲಿದೆ” ಎಂದರು.

































