
ವಾಷಿಂಗ್ಟನ್,ಜ.೧೮- ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯಬೇಕೆಂಬ ವಿಷಯದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಡೆನ್ಮಾರ್ಕ್, ಇಂಗ್ಲೆಂಡ್, ಫ್ರಾನ್ಸ್ ಮತ್ತು ಇತರರ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. ೧೦ ರಷ್ಟು ಸುಂಕ ವಿಧಿಸಿದ್ದಾರೆ.
“ಗ್ರೀನ್‌ಲ್ಯಾಂಡ್‌ನ ಸಂಪೂರ್ಣ ಖರೀದಿ”ಗಾಗಿ ಒಪ್ಪಂದ ಮಾಡಿಕೊಳ್ಳದಿದ್ದರೆ ಜೂನ್ ೧ ರಿಂದ ಶೇ. ೨೫ ರಷ್ಟು ಸುಂಕ ವಿಧಿಸುವುದಾಗಿ ಇದೇ ವೇಳೆ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಗ್ರೀನ್‌ಲ್ಯಾಂಡ್ ಅನ್ನು ವಶಕ್ಕೆ ತೆಗೆದುಕೊಳ್ಳುವ ತನ್ನ ಯೋಜನೆಯನ್ನು ವಿರೋಧಿಸಿದ್ದಕ್ಕಾಗಿ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ನೆದರ್‌ಲ್ಯಾಂಡ್ ಸೇರಿದಂತೆ ಹಲವಾರು ರಾಷ್ಟ್ರಗಳ ಮೇಲೆ ಶೇ. ೧೦ ರಷ್ಟು ಸುಂಕ ಫೆಬ್ರವರಿ ೧ ರಿಂದ ಜಾರಿಗೆ ಬರಲಿವೆ., ಇದಕ್ಕೂ ಮೀರಿ ನಡೆದುಕೊಂಡರೆ ಜೂನ್ ೧ ರಿಂದ ಶೇಕಡಾ ೨೫ ರಷ್ಟು ಸುಂಕ ವಿಧಿಸಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಚೀನಾ ಮತ್ತು ರಷ್ಯಾ ಗ್ರೀನ್‌ಲ್ಯಾಂಡ್‌ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಯಸುತ್ತಿವೆ. ಹೀಗಾಗಿ ಈ ಎರಡೂ ದೇಶಗಳಿಗೆ ಗ್ರೀನ್ ಲ್ಯಾಂಡ್ ವಶಪಡಿಸಿಕೊಳ್ಳಲು ಬಿಡುವುದಿಲ್ಲ, ಹೀಗಾಗಿ ಅಮೆರಿಕಾ ಗ್ರೀನ್‌ಲ್ಯಾಂಡ್ ಅನ್ನು ತನ್ನದಾಗಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ.
ಗ್ರೀನ್ ಲ್ಯಾಂಡ್ ವಶಕ್ಕೆ ಪಡೆಯುವ ಯುರೋಪಿಯನ್ ಒಕ್ಕೂಟದ ಹಲವಾರು ದೇಶಗಳ ಮೇಲೆ ಅಮೆರಿಕಾ ಹೆಚ್ಚಿನ ಸುಂಕ ವಿಧಿಸಿದ್ದು ಈ ಶುಲ್ಕ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಬೆದರಿಕೆ ಹಾಕಿದ್ದಾರೆ.
ಡೆನ್ಮಾರ್ಕ್ ಮತ್ತು ಯುರೋಪಿಯನ್ ಒಕ್ಕೂಟದ ಎಲ್ಲಾ ದೇಶಗಳು ಮತ್ತು ಇತರ ದೇಶಗಳಿಗೆ ಹಲವು ವರ್ಷಗಳಿಂದ ಸುಂಕ ಅಥವಾ ಯಾವುದೇ ರೀತಿಯ ಸುಂಕ ವಿಧಿಸದೆ ಸಬ್ಸಿಡಿ ನೀಡಿದ್ದೇವೆ. ಈಗ, ಶತಮಾನಗಳ ನಂತರ, ಡೆನ್ಮಾರ್ಕ್ ಪ್ರತಿಯಾಗಿ ನೀಡುವ ಸಮಯ ಬಂದಿದೆ ವಿಶ್ವ ಶಾಂತಿ ಅಪಾಯದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ತಮ್ಮ ನಾಯಕತ್ವದಲ್ಲಿ ಅಮೆರಿಕ ಮಾತ್ರ ಇದು ಸಂಭವಿಸುವುದನ್ನು ತಡೆಯಲು ಸಾಧ್ಯ.”ಈ ಪವಿತ್ರ ಭೂಮಿಯನ್ನು ಮುಟ್ಟಲು” ಯಾರಿಗೂ ಅವಕಾಶ ನೀಡುವುದಿಲ್ಲ” ಇಡೀ ಜಗತ್ತು ಅಪಾಯದಲ್ಲಿದೆ ಮತ್ತು ಗ್ರಹದ “ಸುರಕ್ಷತೆ, ಭದ್ರತೆ ಮತ್ತು ಉಳಿವಿಗೆ” ತುಂಬಾ ಅಪಾಯಕಾರಿ ಪರಿಸ್ಥಿತಿಯಾಗಿದೆ ಎಂದಿದ್ದಾರೆ.
ಹಲವು ದೇಶಗಳು ಸಮರ್ಥನೀಯವಲ್ಲದ ಅಥವಾ ಸುಸ್ಥಿರವಲ್ಲದ ಅಪಾಯವನ್ನು ಆಟದಲ್ಲಿ ಇರಿಸಿವೆ. ಆದ್ದರಿಂದ, ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ರಕ್ಷಿಸಲು, ಈ ಸಂಭಾವ್ಯ ಅಪಾಯಕಾರಿ ಪರಿಸ್ಥಿತಿಯನ್ನು ತ್ವರಿತವಾಗಿ ಮತ್ತು ಪ್ರಶ್ನಾತೀತವಾಗಿ ಕೊನೆಗೊಳಿಸಲು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ” ಎಂದು ಅವರು ಹೇಳಿದ್ದಾರೆ.
ಗೋಲ್ಡನ್ ಡೋಮ್ ಮತ್ತು ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಿಂದಾಗಿ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯ ಈಗ ನಿರ್ಣಾಯಕವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
























