
ಸಂಜೆವಾಣಿ ನ್ಯೂಸ್
ಮೈಸೂರು: ಅ.26:- ವಿಶ್ವವಿಖ್ಯಾತ ನಾಡಹಬ್ಬದ ಜಂಬೂ ಸವಾರಿಯಂದು ದಾಖಲೆಯ 10ಲಕ್ಷ ಮಂದಿ ವ್ಯವಸ್ಥಿತವಾಗಿ ಪಾಲ್ಗೊಂಡು ನಿರ್ಗಮಿಸಿದ್ದು, ಇದರ ಸಂಪೂರ್ಣ ಯಶಸ್ಸು ಸರ್ಕಾರಕ್ಕೆ ಸಲ್ಲಲಿದೆ ಎಂದು ಕೆಪಿಸಿಸಿ ಮಾದ್ಯಮ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯಪಾಲರು, ಮೂರು ರಾಜ್ಯದ ಮುಖ್ಯಮಂತ್ರಿ, 14ದೇಶದ ರಾಯಾಭಾರಿಗಳು, ಸುಪ್ರೀಂಕೋರ್ಟ್ ನ್ಯಾಯಾಧೀಶರು, 368 ನ್ಯಾಯಾಧೀಶರು ಭಾಗವಹಿಸಿದ್ದರು. ಕ್ರೀಡಾಪಟುಗಳು, ಸಿನಿಮಾ ನಟರು, ಹೈಕೋರ್ಟ್, ಚುನಾವಣಾ ಆಯುಕ್ತರು, 55ಡಿವೈಎಸ್ಪಿ ಅಧಿಕಾರಿಗಳು, 17 ಸಚಿವರು, 97 ಎಂಎಲ್ಎ, 10ಸಂಸದರು, 85ಐಎಎಸ್, 92ಕೆಎಎಸ್, 76ಐಪಿಎಸ್, 52 ಡಿವೈಎಸ್ಪಿ ಅಧಿಕಾರಿಗಳಿಗೂ 8 ಸಾವಿರ ಮಂದಿ ಪೆÇ್ರೀಟೋಕಾಲ್ ವ್ಯವಸ್ಥೆ ಕಲ್ಪಿಸಿದ್ದಾರೆ. ಮಗುವಿಗೆ ಪೆಟ್ಟಾಗಿದ್ದು, ಪತ್ರಕರ್ತರನ್ನು ತಡೆದು ಸಣ್ಣ ಅಚಾತುರ್ಯ ಬಿಟ್ಟರೆ ಎಲ್ಲವೂ ಸೂಸೂತ್ರವಾಗಿ ನಡೆದಿವೆ. ಮುಖ್ಯಮಂತ್ರಿಗಳು, ಜಿಲ್ಲಾಸಚಿವರಿಗೂ ಮೊಟ್ಟ ಮೊದಲ ದಸರೆಯನ್ನು ಯಶಸ್ವಿಗೊಳಿಸಿದ್ದಾರೆ. ಜಿಲ್ಲಾಡಳಿತ, ಪೆÇಲೀಸರು ಸೇರಿ ಎಲ್ಲರೂ ವ್ಯವಸ್ಥಿತವಾಗಿ ಮಾಡಿದ್ದಾರೆ. ಸಚಿವರನ್ನು ತಡೆದಿದ್ದನ್ನೇ ಮಹಾ ಅಪರಾಧವೆಂದೂ ಹಾಗೂ ದಲಿತ ಎಂದು ಜಾತಿ ಎಳೆದು ತಂದು ಅದರಲ್ಲೂ ರಾಜಕೀಯ ಮಾಡಲು ಹೊರಟಿರುವುದು ಬಿಜೆಪಿಯ ಸಣ್ಣತನವನ್ನು ತೋರುತ್ತಿದೆ ಎಂದರು.
ಶ್ವೇತಾ ಪತ್ರ ಹೊರಡಿಸಲಿ: ಉಷಾ ಶಿವಕುಮಾರ್ ಪುಷ್ಪಾರ್ಚನೆಯಲ್ಲಿ ಭಾಗವಹಿಸಿದ್ದೇ ಮಹಾ ಅಪರಾಧ ಎಂದು ಶಾಸಕ ಶ್ರೀವತ್ಸ ಹೇಳಿದ್ದು, 2007ರಲ್ಲಿ ಅನಿತಾ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಪತ್ನಿ ಜತೆಗೂಡಿ ಪುಷ್ಪಾರ್ಷನೆ ಮಾಡಿಲ್ಲವೆ?. ಯಡಿಯೂರಪ್ಪ ಜಸ್ಟಿಸ್ ಅವರನ್ನು ಜತೆ ಕರೆದೂ ಪುಷ್ಪಾರ್ಚನೆ ಮಾಡಿಲ್ಲವೆ?. ಎರಡೂವರೆ ವರ್ಷ ಕಳೆದರೂ ಒಂದು ರೂಪಾಯಿ ತರಲು ಆಗಿಲ್ಲ. ಹಿಂದೆ ಎಂ.ಕೆ.ಸೋಮಶೇಖರ್ ಸಾಕಷ್ಟು ಅನುದಾನ ತಂದಿದ್ದು, ನೀವೂ ಎನಾದರೂ ಅಭಿವೃದ್ಧಿ ಮಾಡಿದ್ದರೆ ಶ್ವೇತ ಪತ್ರ ಹೊರಡಿಸಿ. ಅದನ್ನು ಬಿಟ್ಟು ಸುಮ್ಮನೆ ಸುದ್ದಿಗೋಷ್ಠಿ ನಡೆಸಿ ಮಾತನಾಡುವುದು ಸರಿಯಲ್ಲ. ಮುಡಾ ವಿಚಾರ ಮಾತನಾಡಿ ಎನಾಗಿದೆ?, ಅಂತೆಯೇ ಪುಷ್ಪಾರ್ಚನೆಯ ವಿಚಾರದಲ್ಲಿ ಯಾವುದೇ ಶಿಷ್ಠಾಚಾರದಲ್ಲಿ ಎನೂ ಆಗಿಲ್ಲ. ಮಹಿಳಾ ಸಮಾನತೆಯನ್ನು ಒಪ್ಪದ ಆರ್ ಎಸ್ ಎಸ್ ಮನಸ್ಥಿತಿಯಲ್ಲಿ ಮಾತನಾಡಿರುವ ಶ್ರೀವತ್ಸ ಮಹಿಳೆಯರನ್ನೇ ಅವಮಾನಿಸಿದ್ದು, ಆ ಕ್ಷೇತ್ರದ ಮಹಿಳೆಯರೇ ಬುದ್ಧಲಿ ಕಲಿಸಬೇಕು. ಹೆಣ್ಣು ವಿರೋಧಿ ಶಾಸಕರಿಗೆ ನನ್ನ ಧಿಕ್ಕಾರ. ಸಂವಿಧಾನದಲ್ಲಿ ಎಲ್ಲಿಯೂ ಮಹಿಳೆಯರೊಂದಿಗೆ ಪುಷ್ಪಾರ್ಚನೆ ಮಾಡಬಾರದು ಎಂಬುದು ಇಲ್ಲ ಎಂದು ಹೇಳಿದರು.
ದೂರು ಕೊಟ್ಟಿರುವೆ: ಜಂಬೂ ಸವಾರಿ ಜಾಹೀರಾತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರ ಬಳಸದಿರುವುದು ಮತ್ತು ಬಿಜೆಪಿ ಸಂಸದರ ಪೆÇೀಟೊ ಬಳಸಿದ್ದಕ್ಕೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ್ದೇನೆ. ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಸಾಧನೆ ತೋರಿರುವ ಯತೀಂದ್ರ ಸಿದ್ದರಾಮಯ್ಯ ನಮ್ಮ ನಾಯಕರಿದ್ದಾರೆ. ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಾವು ಅಧಿಕಾರಿಗಳು ಮಾಡಿರುವ ಎಡವಟ್ಟನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಎಂ.ಲಕ್ಷ್ಮಣ್ ಹೇಳಿದರು.
ಒಕ್ಕಲಿಗ ಸಮುದಾಯಕ್ಕೆ ಎಚ್ಡಿಕೆ ಕಳಂಕ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ 132 ದಿನ ಆಗಿದ್ದು, ಎಚ್.ಡಿ.ಕುಮಾರಸ್ವಾಮಿ 62 ಸುದ್ದಿಗೋಷ್ಠಿ ಮಾಡಿದ್ದು, ಅಷರಲ್ಲಿಯೂ ಮುಖ್ಯಮಂತ್ರಿಗಳನ್ನು ಆಧಾರ ರಹಿತ ತೇಜೋವಧೆ ಮಾಡುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಕಳಂಕ ತರುವ ಕೆಲಸವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಟೀಕಿಸುವ ಬದಲು ಸುಪಾರಿ ಕೊಟ್ಟು ಹೊಡೆಸಿಬಿಡಿ ಡಿ.ಕೆ.ಶಿವಕುಮಾರ್ ರನ್ನು ಒಡೆಸಿಬಿಡಿ. ನಿಮ್ಮ ಮುಂದೆ ಮತ್ತೊಬ್ಬ ಒಕ್ಕಲಿಗ ನಾಯಕ ಬೆಳೆಯುವುದನ್ನು ನೀವು ಒಪ್ಪಿಕೊಳ್ಳುವುದಿಲ್ಲ. ಕೇಂದ್ರ ಸಚಿವರಾಗಿ ಎರಡೂವರೆ ವರ್ಷವಾಯಿತು. ಅನುದಾನ 10ರೂಪಾಯಿ ತಂದಿಲ್ಲ. ಸ್ಟಿಂಗ್ ಪ್ರಕರಣದಲ್ಲಿನಿತೀಶ್ ಪಾಂಡೆ ವ್ಯಕ್ತಿ ಬಂಧಿಸಿದಾಗ ಅವರಿಗೆ ಬೇಲ್ ಕೊಡಿಸಿದ್ದು ಯಾರು? ಅವರಿಗೂ ನಿಮಗೂ ಎನೂ ಸಂಬಂಧ 50 ಸಾವಿರ ರೂ.ಗಳನ್ನು ನಿಮ್ಮ ಪಕ್ಷ ಮುಖಂಡ ಮೋಹನ್ ಗೌಡ ಹಾಕಿದ್ದಾರೆ. ಅದಕ್ಕೂ ಮುನ್ನ 5 ಲಕ್ಷ ಅಕೌಂಟ್ ಮೂಲಕ ಟ್ರಾನ್ಸ್ ಫಾರ್ಮ್ ಆಗಿದೆ. ಈ ಹಣ ಎಲ್ಲಿಂದ ಬಂದಿತು. ಸೋಷಿಯಲ್ ಮೀಡಿಯಾದಲ್ಲಿ ಅಪೆÇ್ಲೀಡ್ ಮಾಡಿಸಿದ್ದು ಯಾರು?. ಎಲ್ಲರೂ ಕುಮಾರಸ್ವಾಮಿ ಎಡ,ಬಲ, ಜತೆಗಿರುವವರೇ ಆಗಿದ್ದಾರೆ. ನಿಮ್ಮ ಆಪ್ತನ ಮನೆ ದಾಳಿ ವೇಳೆ 17 ಪೆನ್ ಡ್ರೈವ್ ಸಿಕ್ಕಿವೆ. ಮುಂದಿನ ಒಂದು ವಾರದೊಳಗೆ ಎಲ್ಲವನ್ನೂ ಎಪಿಸೋಡ್ ರೀತಿ ಹೇಳುತ್ತೇವೆ. ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ, ಅವರ ಕುಟುಂಬ, ಮಗನನ್ನು ತೆಜೋವಧೆ ಮಾಡಿದ್ದಿರಿ. ಅದಕ್ಕೆ ದುಡ್ಡು ಕೊಟ್ಟಿರುವುದು ಹೊರಗೆ ಬರಲಿದೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಪ್ರಧಾನ ಕಾರ್ಯದರ್ಶಿ ಈಶ್ವರ್ ಚಕ್ಕಡಿ, ಗಿರೀಶ್, ವಕ್ತಾರ ಎಂ.ಮಹೇಶ್ ಇದ್ದರು.
























