Home Uncategorized ಮೇ.26ರಂದು ಬೆಂಗಳೂರಿನಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ

ಮೇ.26ರಂದು ಬೆಂಗಳೂರಿನಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ

ಸಂಜೆವಾಣಿ ವಾರ್ತೆ

ಬಳ್ಳಾರ, ಮೇ.24: ಬೆಂಗಳೂರಿನಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಯನ್ನು ಮೇ.26ರಂದು ಕರೆಯಲಾಗಿದೆ ಎಂದು ಸರ್ಕಾರಿ ಪಡಿತರ ವಿತರಕರ ಸಂಘದ  ಬಳ್ಳಾರಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯಕಾರ್ಯಾಧ್ಯಕ್ಷ ಡಿ.ತಾಯಣ್ಣ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ವಿ ಎಸ್ ಎಸ್ ಏನ್ ಕಾರ್ಯದರ್ಶಿಯವರಿಗೆ ತಿಳಿಸುವುದೇನೆಂದರೆ ಹೋದ ತಿಂಗಳಿಂದ ಈ ತಿಂಗಳು ತುಂಬಾ ಸರ್ವರ್ ಸಮಸ್ಯೆ ಹೆಚ್ಚಾಗಿದ್ದು ರಾಜ್ಯದ್ಯಂತ ಕಾರ್ಡುದಾರರು ಅಂಗಡಿಯ ಮುಂದೆ ಬಂದು ಗಲಾಟೆ ಮಾಡುವುದು ಸರಕಾರಕ್ಕೆ ಶಾಪ ಹಾಕುವುದು ಅಂಗಡಿ ಮಾಲೀಕರಿಗೂ ಶಾಪ ಹಾಕಿ ಗಲಾಟೆ ನಡೆಯುತ್ತಿದೆ ಇಡೀ ರಾಜ್ಯದ್ಯಂತ ಈ ಬೆಳವಣಿಗೆ ಯಾವಾಗಲೂ ಹಾಗಿರಲಿಲ್ಲ ಈ ಎರಡು ತಿಂಗಳಿಂದ ಸಮಸ್ಯೆಗಳನ್ನು ಎದುರಿಸಲು ನಮ್ಮಲ್ಲಿ ತುಂಬಾ ತೊಂದರೆಯಾಗುತ್ತಿದೆ ಎಲ್ಲದೆ ರಾಜ್ಯ ಅಧ್ಯಕ್ಷರಾದ ಕೃಷ್ಣಪ್ಪನವರು ಪ್ರತಿದಿನ ಬೆಂಗಳೂರು ಕಾರ್ಯದರ್ಶಿಯವರ ಆಫೀಸ್ ಆಯುಕ್ತರ ಆಫೀಸ್ ಎನ್ಐಸಿ ಅವರ ಆಫೀಸ್ ಪ್ರತಿದಿನ ತಿರುಗುತ್ತಿದ್ದಾರೆ ಆದರೂ ಸಹ ಸರಿಪಡಿಸುತ್ತಿಲ್ಲ ಆದ್ದರಿಂದ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಆದ್ದರಿಂದ 26 ನೇ ತಾರೀಕು ಮಂಗಳವಾರ ರಾಜ್ಯದ ಎಲ್ಲಾ ತಾಲೂಕ್ನಿಂದಲೂ 4 ರಿಂದ 5 ಜನ ಕರೆದುಕೊಂಡು ಬಂದು ಫ್ರೀಡಂ ಪಾರ್ಕ್ ಹತ್ರ ಸಭೆ ಮಾಡೋಣ ಕಾರ್ಯದರ್ಶಿ ಅವರು 18ನೇ ತಾರೀಖ್ ಎನ್ ಐ ಸಿ ಅವರ ಜೊತೆ ಮಾತನಾಡಿ ಈ ಗಂಟೆಯಿಂದಲೇ ಸರ್ವರ್ ಸಮಸ್ಯೆ ಇರಬಾರದು 12 ದಿವಸದೊಳಗೆ ವಿತರಣೆ ಗೆ ಅವಕಾಶ ಮಾಡಿಕೊಡಬೇಕೆಂದು ಆದೇಶ ಮಾಡಿದ್ದಾರೆ ಅದರಂತೆ ಆಯುಕ್ತರು ಸಹ ನಿಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿದ್ದರು ಸಹ ಇನ್ನು ಬಗೆಹರಿದಿಲ್ಲ ಆದ್ದರಿಂದ ದಯಮಾಡಿ ರಾಜ್ಯದ ಎಲ್ಲಾ ತಾಲೂಕಿನಿಂದಲೂ ಮಾಲೀಕರು ಬಂದು ಭಾಗವಹಿಸಿ ಮುಂದಿನ ಬೆಳವಣಿಗೆಗೆ ಚರ್ಚೆ ಮಾಡೋಣ ನಾವೆಲ್ಲರೂ ಸುಮ್ಮನೆ ಕೂತರೆ ಕೂಲಿ ಕಾರ್ಮಿಕರಿಗೆ ಮತ್ತು ನಮ್ಮ ಮಾಲಕರಿಗೆ ದಿನನಿತ್ಯ ಸಮಸ್ಯೆಗಳೇ ಆಗಿವೆ ಆದ್ದರಿಂದ ಈ ಸಭೆಯನ್ನು ತುರ್ತಾಗಿ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.