ಬೆಲೆಕುಸಿತ ಸಂಕಷ್ಟದಲ್ಲಿ ಪಪ್ಪಾಯ ಬೆಳೆದ ರೈತ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.20 :
ಒಂದೊಮ್ಮೆ ಪಪ್ಪಾಯ ಹಣ್ಣು ಬೆಳೆದು ಜಣ ಜಣ ಕಸಂಚಾಣ ಎಣಿಸಿದ್ದ ರೈತ ಈಗ ಅದರ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ 300 ಕ್ಕು ಹೆಚ್ಚು ಎಕರೆ ಪ್ರದೇಶದಲ್ಲಿ ಪಪ್ಪಾಯಿ ಬೆಳೆ ಬೆಳೆಯಲಾಗಿದೆ. ಎಕರೆಗೆ ಒಂದು ಲಕ್ಷದಂತೆ ಖರ್ಚು ಮಾಡಲಾಗಿದೆ.
ಬೆಳೆ ಕೈಗೆ ಬಂದಾಗ ಮಾರುಕಟ್ಟೆಯಲ್ಲಿ ಹಣ್ಣಿಗೆ ಬೆಲೆ ಕುಸಿದಿದೆ. ಕೆಜಿ ಹಣ್ಣಿಗೆ ಕೇವಲ ಮೂರು ನಾಲ್ಕು ರೂಪಾಯಿ ಕೇಳ್ತಾರೆ ಹೋಲ್ ಸೇಲ್ ಮಾರಾಟಗಾರರು.
ಗಿಡದಲ್ಲಿನ ಹಣ್ಣು ಕಿತ್ತು, ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಸಟ ಮಾಡಿದರೆ ಹಣ್ಣು ಬಿಡಿಸಿದ ಖರ್ಚು ಕೂಡ ಸಿಗುತ್ತಿಲ್ಲವೆಂದು ಗಿಡದಲ್ಲಿ ಹಣ್ಬಿಣು ಹರಿಯದೆ ಬಿಡಲಾಗಿದೆ.ಇದರಿಂದಾಗಿ ಗಿಡದಲ್ಲಿಯೇ ಹಣ್ಣು ಕೊಳೆತು ಹೋಗುವ ಹಂತಕ್ಕೆ ತಲುಪುತ್ತಿದೆ. ಪಪ್ಪಾಯಿ ಬೆಳೆದ ರೈತರು ಕಂಗಾಲಾಗಿದ್ದು ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯ ಮಾಡ್ತಿದ್ದಾರೆ.
ತೋಟಗಾರಿಕೆಗೆ ಬೆಳೆಗೆ ಯಾವಾಗಲೂ ಬೆಂಬಲ ಬೆಲೆ ಇರೋದಿಲ್ಲ. ಮಾವಿನ ಹಣ್ಣಿನ‌ ಬೆಳೆಗಾರರಿಗೆ ರಾಜ್ಯದಲ್ಲಿ 1100 ಕೋಟಿ ರೂ ಸಹಾಯ ಧನ ನೀಡಿದಂತೆ ಪಪ್ಪಾಯ ಬೆಳೆನೀಡಬೇಕೆಂಬುದು. ದು ಬಾರಿ ಕನಿಷ್ಠ ಹಾಕಿದ ಬಂಡವಾಳಕ್ಕಾದ್ರೂ ಪರಿಹಾರ ಕೊಡಿ ಎಂಬುದು ರೈತರ ಒತ್ತಾಯದ ಮನವಿಯಾಗಿದೆ.