
ಪುತ್ತೂರು: ಪುತ್ತೂರು ತಾಲೂಕು ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಮತ್ತು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಂಟಿ ಆಯೋಜಕತ್ವದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಕೇಂದ್ರಗಳ ಸಹಯೋಗದೊಂದಿಗೆ ‘ಸಾಮೂಹಿಕ ಸರಸ್ವತೀ ವಂದನೆ’ ಮತ್ತು ‘ವಿದ್ಯಾ ಸಂಕಲ್ಪ ಕಾರ್ಯಕ್ರಮ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಬೆಳಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ನಿಕಟಪೂರ್ವ ಅಧ್ಯಕ್ಷ ಕೇಶವಪ್ರಸಾದ ಮುಳಿಯ ಹವನದ ಸಂಕಲ್ಪ ನೆರವೇರಿಸಿದರು. ಜಯರಾಮ ಜೋಯಿಸ್ ಮತ್ತು ತಂಡವು ಸರಸ್ವತೀ ಸೂಕ್ತ ಹವನವನ್ನು ನಡೆಸಿಕೊಟ್ಟರು.
ದೇವಾಲಯ ಸಂವರ್ಧನ ಸಮಿತಿ ವಿಭಾಗ ಪ್ರಮುಖ್ ಕೇಶವಪ್ರಸಾದ ಮುಳಿಯ ಅವರು ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದ ಪ್ರತಿಜ್ಞಾ ಪೂರ್ವಕ ಸಂಕಲ್ಪವನ್ನು ಭೋದಿಸಿದರು. ಪೂರ್ಣಾಹುತಿ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ, ದೇವಾಲಯ ಸಂವರ್ಧನಾ ಸಮಿತಿಯ ಪ್ರಮುಖರಾದ ರವೀಂದ್ರನಾಥ್ ರೈ, ರಾಮ್‌ದಾಸ್ ಗೌಡ, ರಾಧಾಕೃಷ್ಣ ನಂದಿಲ, ಕೃಷ್ಣಕುಮಾರ್ ಅತ್ರಿಜಾಲು, ಸಂಪತ್ ಕುಮಾರ್, ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಯೋಜಕಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಧಾರ್ಮಿಕ ಶಿಕ್ಷಣ ಕೇಂದ್ರದ ಬೋಧಕರಾದ ವಿ. ಪ್ರಭಾವತಿ, ಸುಧಾ ಹೆಬ್ಬಾರ್, ಚಂದ್ರಪ್ರಭಾ, ಶಂಕರಿ ಶರ್ಮ, ವಿಜಯ ಸರಸ್ವತಿ, ಸುಮಂಗಲ, ಕವಿತಾ ಕೊಳತ್ತಾಯ, ವತ್ಸಲ ರಾಜ್ಞಿ, ವೀಣಾ ಬಿ.ಕೆ, ತೇಜಸ್ವಿ, ಪ್ರಶಾಂತ್ ದೊಡ್ಡಡ್ಕ ಹಾಗೂ ನಿತ್ಯಕರಸೇವಕರ ಅಧ್ಯಕ್ಷ ವಾದಿರಾಜ್ ಮತ್ತು ತಂಡದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
೧೭೫ ವಿದ್ಯಾರ್ಥಿಗಳು
೧೭೫ ವಿದ್ಯಾರ್ಥಿಗಳು ಮೊದಲಿಗೆ ಭಕ್ತಿಪೂರ್ವಕ ಭಜನೆಯೊಂದಿಗೆ, ಸರಸ್ವತಿ ಅಷ್ಟೋತ್ತರ ಪಠಿಸುತ್ತಾ, ಪುಸ್ತಕಕ್ಕೆ ಪುಷ್ಪಾರ್ಚನೆ ಮಾಡಿದರು. ಮಂಜುಳಗಿರಿ ವೆಂಕಟರಮಣ ಭಟ್ ಅವರು ಸರಸ್ವತಿ ಅಷ್ಟೋತ್ತರ ಮತ್ತು ಶ್ಲೋಕಗಳನ್ನು ಮಕ್ಕಳಿಗೆ ಬೋಧಿಸಿದರು. ವಿದ್ಯಾರ್ಥಿಗಳ ಜೊತೆಗೆ ಜೊತೆಗೆ ಬೋಧಕರು, ಪೋಷಕರು ಹಾಗೂ ಭಕ್ತಾದಿಗಳು ಸೇರಿ ಸುಮಾರು ೨೭೫ ಮಂದಿ ಭಾಗವಹಿಸಿದರು.
ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಸಾದ ಪುಸ್ತಕ ಹಾಗೂ ದೇವರ ನಾಮ ಬರೆದ ಪೆನ್ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.
ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಮುಂಡ್ಯತ್ತಾಯ ದೈವಸ್ಥಾನ ಪಾಂಗಳಾಯಿ, ಮುಳಿಯ ದೇವರಕಟ್ಟೆ ಕೋರ್ಟ್ ರಸ್ತೆ, ಅಟಲ್ ಉದ್ಯಾನ ಕೊಂಬೆಟ್ಟು, ಮಾಸ್ಟರ್ ಪ್ಲಾನರಿ ಕಲ್ಲೇಗ, ಷಣ್ಮುಖ ಸುಬ್ರಹ್ಮಣ್ಯ – ಮಹಾವಿಷ್ಣು ದೇವಸ್ಥಾನ ಕೆಮ್ಮಿಂಜೆ, ರಾಘವೇಂದ್ರ ಮಠ ಕಲ್ಲಾರೆ ಕೇಂದ್ರಗಳಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ನಡೆಯುತ್ತಿದೆ.






















