
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.20: ಅಂದ ಅನಾಥರ ಕಾಳಜಿಯಲ್ಲಿಯೇ ಶಿವನನ್ನು ಕಂಡ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಎಂದು ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನುಡಿದರು
ಶ್ರೀ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯ ಬಳಗ ಬಳ್ಳಾರಿ ಇವರು ಆಯೋಜಿಸಿದ್ದ ಪದ್ಮಭೂಷಣ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯ ಸ್ಮರಣೋತ್ಸವ ಗುರು ನಮನ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಎಂ ವೀರಭದ್ರಯ್ಯ ಗವಾಯಿಗಳು ಸಂಗೀತವನ್ನು ನೀವು ಉಳಿಸಿ ಸಂಗೀತ ನಿಮ್ಮನ್ನು ಉಳಿಸುತ್ತದೆ ಎನ್ನುವ ಪುಟ್ಟರಾಜ ಕವಿಗಳ ಮಾತು ಅಕ್ಷರ ಸಹ ಸತ್ಯ ಅಂಧರ ಬಾಳಲ್ಲಿ ಸಂಗೀತವು ಬೆಳಕನ್ನು ಚೆಲ್ಲಿದೆ ಇದಕ್ಕೆ ಮೂಲ ಕಾರಣ ನಡೆದಾಡುವ ದೇವರು ಶ್ರೀ ಪುಟ್ಟರಾಜ ಗವಾಯಿಗಳು ಇವರ ಸ್ಮರಣಾರ್ಥವಾಗಿ ಕಾರ್ಯಕ್ರಮವನ್ನು ಮಾಡುತ್ತಿರುವುದು ನಮ್ಮೆಲ್ಲರಿಗೆ ಸಂತೋಷ ಎಂದು ಹೇಳಿದರು
ಕಾಯಕವೇ ಕೈಲಾಸವಯ್ಯ ಎಂಬ ಶರಣರ ವಾಣಿಯನ್ನ ಅನುಷ್ಠಾನ ಗೊಳಿಸಿದ ಮಹಾನ್ ವ್ಯಕ್ತಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಭಾರತೀಯ ಪರಂಪರೆಯಲ್ಲಿ ಹಿಂದುಸ್ತಾನಿ ಸಂಗೀತ ವಿಶೇಷವಾದದ್ದು ಮನಸ್ಸು ಅರಳುವಂತಹ ಸಂಗೀತವನ್ನು ಕೇಳಬೇಕು ಎಂದು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾ ಮಠ ಸೋಮಸಮುದ್ರದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು
ವೇದಿಕೆಯ ಮೇಲೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ಕೆ ಚನ್ನಪ್ಪ
ಹಳ್ಳಿ ಮನೆ ಹೋಟೆಲ್ ಸಂಸ್ಥಾಪಕರಾದ ವೈ ದೊಡ್ಡಬಸಪ್ಪ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ವಿಭಾಗದ ಆಧ್ಯಾಪಕರಾದ
ಎಂ ಕಲ್ಯಾಣ ಬಸವ ಉಪಸ್ಥಿತರಿದ್ದರು ನಂತರ ಚಿತ್ರದುರ್ಗದ ಹಿರಿಯ ಸಂಗೀತ ಕಲಾವಿದರಾದ ಶ್ರೀ ತೋಟಪ್ಪ ಉತ್ತಂಗಿ ಇವರಿಗೆ ವಚನಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಘವೇಂದ್ರ ಗೂಡದವರು ಕೆ ಆರ್ ಯೆರೇಗೌಡ ಬಿ ಕಾಸಿಂ ಅಲಿ ಶ್ರೀ ಕೊತ್ತಲಚಿಂತ ಶರಣಪ್ಪ ಶ್ರೀ ಪಂಡಿತ ದೊಡ್ಡಯ್ಯ ಕಲ್ಲೂರು ಕೆ ದೊಡ್ಡಬಸಪ್ಪ ವಿಎಂ ವೀರಭದ್ರಯ್ಯ ಗವಾಯಿಗಳು ವಿನಯ್ ಪ್ರಸಾದ್ ಸರಸ್ವತಿ ಶಬಾನ ದುರ್ಗೇಶ ಗಾಯನವನ್ನು ಪ್ರಸ್ತುತ ಪಡೆದರು ಹರ್ಷ ಆಚಾರ್ ಯೋಗೇಶ ಬಣಗಾರ ಪವಮಾನ ಅರಳಿ ಕಟ್ಟೆ ವಿರುಪಾಕ್ಷಪ್ಪ ದೇವಲಾಪುರ ಉಮೇಶ ಸಂಡೂರು ತಬಲಾ ಸಾತಿಯನ್ನ ನೀಡಿದರು ಸ್ವಾಗತ ಕೆ ಆರ್ ಎರೇಗೌಡ ಪ್ರಾರ್ಥನೆ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯ ಬಳಗ ನಿರೂಪಣೆ ವಿಷ್ಣು ಹಡಪದ ನೆರವೇರಿಸಿ ಕೊಟ್ಟರು