
ಪುತ್ತೂರು; ಮಳೆಗಾಲದ ಆರಂಭದಲ್ಲಿಯೇ ಪುತ್ತೂರಿನ ಕೆಲ ಭಾಗದಲ್ಲಿ ಹಾನಿ ಉಂಟಾದ ಪ್ರಕರಣಗಳ ನಡೆದಿವೆ. ಬೆಟ್ಟಂಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಪಾಣಾಜೆಯ ಆರ್ಲಪದವು ಎಂಬಲ್ಲಿ ಅಂಗನವಾಡಿಯ ಆವರಣಗೋಡೆ ಜರಿದು ಬಿದ್ದಿದೆ. ನಿಡ್ಪಳ್ಳಿ ಗ್ರಾಮದ ಜೆಸಿ ಕಾಲೋನಿಯ ಅಂಗನವಾಡಿಯ ಆವರಣ ಗೋಡೆಯೂ ಕುಸಿತವಾಗಿದೆ. ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ತಿಲು ಎಂಬಲ್ಲಿ ಲೀಲಾ ಎಂಬವರ ಮನೆಯ ಮೇಲ್ಛಾವಣಿಗೆ ಮಳೆಯಿಂದಾಗಿ ಹಾನಿ ಉಂಟಾಗಿದೆ. ಈ ಮೂರು ಪ್ರಕರಣಗಳಲ್ಲಿಯೂ ಮಕ್ಕಳಿಗಾಗಲೀ ಮನೆ ಮಂದಿಗಾಗಲೀ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ತಾಲೂಕು ಪ್ರಕಟಣೆ ತಿಳಿಸಿದೆ.






















