೩೫೦ ಗ್ರಾಂ ತೂಕದ ಗಾಂಜಾ ವಶ: ಆರೋಪಿ ಬಂಧನ

ಮಂಗಳೂರು-ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಿಕುಳ ಬಳಿ ಇರುವ ದೂರದರ್ಶನ ಕೇಂದ್ರದ ಎದುರು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವಾಮಂಜೂರು ನಿವಾಸಿ ಮೊಹಮ್ಮದ್ ಶಾರೂಖ್ (೨೮) ಎಂಬವರಿಂದ ಒಟ್ಟು ೩೫೦ ಗ್ರಾಂ ತೂಕದ ಗಾಂಜಾ, ಮೊಬೈಲ್ ಮತ್ತು ಆಟೋ ರಿಕ್ಷಾವನ್ನು ವಶಪಡಿಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನವನ್ನು ವಿಧಿಸಲಾಗಿರುತ್ತದೆ.
ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಗವಿರಾಜ್ ಆರ್.ಪಿ ರವರ ನಿರ್ದೆಶನದಂತೆ ಪೊಲೀಸ್ ಉಪ ನಿರೀಕ್ಷಕ ಅರುಣ್ ಕುಮಾರ್ ಡಿ ಹಾಗೂ ಕ್ರೈಂ ಸಿಬ್ಬಂದಿಗಳು ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.