
ಸುಳ್ಯ:ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನ ೨೫ ಕೋಟಿ ಎಂಬ ವಿಷಯದಲ್ಲಿ ಕೆಲವು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾದ ವಿವರ ಶಾಸಕರ ಕಚೇರಿಯು ಅಧಿಕೃತವಾಗಿ ನೀಡಿರುವುದಲ್ಲ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ತಿಳಿಸಿದೆ.
ಮುಖ್ಯಮಂತ್ರಿ ಮೂಲ ಸೌಕರ್ಯ ನಿಧಿ ೨೫ಕೋಟಿ ಅನುದಾನ ಹಂಚಿಕೆಯ ವಿವರಗಳು ಎಂಬ ನೆಲೆಯಲ್ಲಿ ಕೆಲವು ಕಾಮಗಾರಿಗಳ ವಿವರ ಪ್ರಕಟವಾಗಿದ್ದು ಇದು ಶಾಸಕರ ಕಛೇರಿಯಿಂದ ಅಧಿಕೃತವಾಗಿ ಕೊಟ್ಟಿರುವುದಿಲ್ಲ.ಮುಂದಿನ ದಿನಗಳಲ್ಲಿ ಈ ಕುರಿತು ಅಧಿಕೃತವಾಗಿ ಶಾಸಕರ ಕಚೇರಿ ಪ್ರಕಟಣೆ ಹೊರಡಿಸಲಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೀತಿಯ ಅನುದಾನ ಹಂಚಿಕೆಯ ವಿವರವನ್ನು ನಾನಾಗಲೀ, ನಮ್ಮ ಕಚೇರಿ ಆಗಲಿ ಯಾರಿಗೂ ನೀಡಿಲ್ಲ, ಈ ಬಗ್ಗೆ ಹಲವು ಕಡೆಗಳಿಂದ ಕರೆ ಬರುತ್ತಿದ್ದು ಈ ಕುರಿತ ಅಧಿಕೃತ ಮಾಹಿತಿ ಮುಂದೆ ನೀಡಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಕೂಡ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.






























