
ಸುಳ್ಯ:ಸುಳ್ಯ ತಾಲೂಕು ಮಕಂಜ ಗ್ರಾಮದ ಬಳ್ಳಕಾನ ನಿವಾಸಿ ಐತಪ್ಪ ನಾಯ್ಕ ಎಂಬುವವರ ಪುತ್ರಿ ಕೀರ್ತನಾ (೧೭) ಅವರು ಮಕಂಜ ಮನೆಯಿಂದ ನಾಪತ್ತೆಯಾಗಿದ್ದು ಇವರ ಮಾಹಿತಿ ತಿಳಿದು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸುಳ್ಯ ಪೊಲೀಸ್ ಠಾಣೆ ಮಾಹಿತಿ ನೀಡಿದೆ.
ಮೇ ೫ ರಂದು ಬೆಳಿಗ್ಗೆ ೧೦:೩೦ಕ್ಕೆ ಮನೆಯಿಂದ ಮಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು ಈವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಇದೀಗ ಬಾಲಕಿಯ ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಸುಮಾರು ೫ ಅಡಿ ಎತ್ತರ ಗೋಧಿ ಮೈಬಣ್ಣ, ಕನ್ನಡ ಮತ್ತು ತುಳು ಭಾಷೆಯಲ್ಲಿ ಮಾತನಾಡಬಲ್ಲವರಾಗಿದ್ದು, ಕಾಣೆಯಾಗುವ ಸಂದರ್ಭದಲ್ಲಿ ಹಳದಿ ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.





























