Home ಜಿಲ್ಲೆ ಮಂಗಳೂರು ೧೬೨ ಕೋಟಿ ವ್ಯವಹಾರ – ೬೩ ಲಕ್ಷ ಲಾಭ – ಶೇ.೧೦ ಡಿವಿಡೆಂಡ್ ವಿತರಣೆ

೧೬೨ ಕೋಟಿ ವ್ಯವಹಾರ – ೬೩ ಲಕ್ಷ ಲಾಭ – ಶೇ.೧೦ ಡಿವಿಡೆಂಡ್ ವಿತರಣೆ

ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಮಹಾಸಭೆ-ಸಾಧಕರಿಗೆ ಸನ್ಮಾನ
ಸುಳ್ಯ:ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ವಿಷ್ಣು ಭಟ್ ಮೋಲೆತೋಟ ಅವರ ಅಧ್ಯಕ್ಷತೆಯಲ್ಲಿ ಶ್ರೀ ಗೋಪಾಲಕೃಷ್ಣ ಗೌಡ ಕೇಪಳಕಜೆ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಸಂಘವು ೧೬೨.೩೧ ಕೋಟಿ ವ್ಯವಹಾರ ನಡೆಸಿದೆ. ೬೩,೪೦,೨೨೩ ಲಾಭ ಬಂದಿದೆ. ಅದರಲ್ಲಿ ಸದಸ್ಯರಿಗೆ ಡಿವಿಡೆಂಟ್ ಶೇ.೧೦ ನೀಡಲಾಗುತ್ತಿದೆ ಎಂದು ಘೋಷಿಸಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂತೋಷ್ ಎನ್. ಸ್ವಾಗತಿಸಿ, ವರದಿ ಮಂಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ದೇವಿಪ್ರಸಾದ್ ಸುಳ್ಳಿ, ನಿರ್ದೇಶಕರಾದ ಜಯಪ್ರಸಾದ್ ಸುಳ್ಳಿ, ಶುಭಕರ ನಾಯಕ್ ಬೊಳ್ಳಾಜೆ, ಸತ್ಯೇಶ್ ಕುಮಾರ್ ಚಂದ್ರೋಡಿ, ಉಮೇಶ್ ಪ್ರಭು ಕೆ., ಹರೀಶ ಸುಳ್ಳಿ, ಹರಿಪ್ರಸಾದ್ ಬಿ.ವಿ., ಕುಲದೀಪ್ ಎಚ್., ಚಂದ್ರಶೇಖರ ನಾಯ್ಕ ಕೆ., ಇಂದಿರಾ ಕೆ., ಸಂಧ್ಯಾ ಕೆ.ಎಲ್., ವೃತ್ತಿಪರ ನಿರ್ದೇಶಕರಾದ ಯತೀಶ್ ಬೊಳ್ಳಾಜೆ, ತೀರ್ಥಕುಮಾರ್ ಟಿ. ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ರಕ್ಷಣ್ ಕೆ., ಸಿಂಧೂರ ಬಿ., ಬುಸ್ತಾನ, ಭವಿಷ್ಯ, ಯಶಿಕಾ ಬಿ., ಧನ್ವಿತ್ ಕುಮಾರ್ ಕೆ., ಲೇಖನ ಎಸ್.ಪಿ. ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಯು.ಸಾಯಿ ಚರಣ್, ಸಾಯಿ ಚರಣ್ ಬಿ., ಪದವಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕುಲಶ್ರೀ, ತನುಷ್ ಆರ್.ಗೌಡ, ನಿಶ್ಮಿತಾ ಎಸ್., ಮಿತಾಶ್ರೀ ಎಂ.ಎಂ.ಯವರನ್ನು ಗೌರವಿಸಲಾಯಿತು.
ಹಿರಿಯ ಸದಸ್ಯರಾದ ನಾರಾಯಣ ವಿ. ನಾಯಕ್ ಸುಳ್ಳಿ, ಕಣ್ಣ ಪಾಟಾಳಿ ಇರಂತಕಜೆ, ವಿಷ್ಣು ಭಟ್ ವಲಿಕಜೆ, ರೇಜಪ್ಪ ಗೌಡ ಜಿ. ಗುಡ್ಡನಮನೆ, ಚನಿಯ ಕಜೆ ಹಾಗೂ ಯುವ ಕೃಷಿಕ ಶ್ರೇಯಸ್ ಸುಳ್ಳಿ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ ಗೌಡ ಕೆರೆಮೂಲೆ ಅವರನ್ನು ಸನ್ಮಾನಿಸಲಾಯಿತು.
ಸಂಘದಲ್ಲಿ ಉತ್ತಮ ವ್ಯವಹಾರ ನಡೆಸಿದ ನವೋದಯ ಸ್ವಸಹಾಯ ಸಂಘಗಳಾದ ಮಯೂರ ನವೋದಯ ಸ್ವಸಹಾಯ ಸಂಘ ಸುಳ್ಳಿ, ನಾರ್ಣಕಜೆ, ಪ್ರಿಯದರ್ಶಿನಿ ನವೋದಯ ಸ್ವಸಹಾಯ ಸಂಘ ಹರ್ಲಡ್ಕ, ಯಶಸ್ವಿನಿ ನವೋದಯ ಸ್ವಸಹಾಯ ಸಂಘ ಕಕ್ಕೆಬೆಟ್ಟು ಸಂಘಗಳನ್ನು ಗೌರವಿಸಲಾಯಿತು.