Home ಜಿಲ್ಲೆ ಮಂಗಳೂರು ೧೫ ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ

೧೫ ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ

ಉಡುಪಿ: ಸುಮಾರು ೧೫ ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಮಲ್ಪೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.ಬಂಧಿತನನ್ನು ಜುಬೇರ (೪೨) ಎಂದು ಗುರುತಿಸಲಾಗಿದೆ.
ಈತನ ವಿರುದ್ಧ ಉಡುಪಿಯ ಮಾನ್ಯ Pಖಐ Sಖ. ಅIಗಿIಐ ಎUಆಉಇ & ಅಎಒ ನ್ಯಾಯಾಲಯದಲ್ಲಿ ಸಿ.ಸಿ.ನಂ. ೧೮೬೬/೨೦೨೪, ೧೩೭೫/೨೦೨೪, ೧೩೭೩/೨೦೨೪, ೮೩೮/೨೦೨೪, ೮೩೭/೨೦೨೪ ಪ್ರಕರಣಗಳು ದಾಖಲಾಗಿದ್ದು, ಅಪರಾಧ ಕ್ರಮಾಂಕ ೧೬೫/೨೦೧೧ರಲ್ಲಿ ಕಲಂ ೪೨೦, ೪೦೮, ೧೦೯, ೫೧೧, ಖ/W ೩೪ IPಅ ಹಾಗೂ ಅಕ್ರ.೧೨೪/೨೦೧೧ರಲ್ಲಿ ಕಲಂ ೩೭೯ IPಅ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ ಹಾಗೂ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ, ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರು (ಕಾ&ಸು) ಅನೀಲ್ ಕುಮಾರ್ ಡಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡದಲ್ಲಿ ಹೆಚ್‌ಸಿ ಸುರೇಶ್ ಕುಮಾರ್, ಹೆಚ್‌ಸಿ ವಿಶ್ವನಾಥ್, ಹೆಚ್‌ಸಿ ಭಾಸ್ಕರ್ ಹಾಗೂ ಪಿಸಿ ಕುಬೇರ ಭಾಗವಹಿಸಿದ್ದರು.
ತಂಡವು ಮಾರ್ಚ್ ೨೨ರಂದು ಬೆಂಗಳೂರಿನ ಶಿವಾಜಿನಗರದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಮಾರ್ಚ್ ೨೩ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.