ಹ್ಯಾಟ್ರಿಕ್ ಸಾಧನೆ ಸೆಂಟ್ ಮೇರಿಸ್ ಬಾಲಕಿಯರ ತಂಡ

ಸಂಜೆವಾಣಿ ವಾರ್ತೆ
ಹನೂರು ಸೆ 24 :-
ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕಿಯರ ಥ್ರೋಬಾಲ್ ಪಂದ್ಯಾಟದಲ್ಲಿ ಮಾರ್ಟಳ್ಳಿಯ ಸೆಂಟ್ ಮೇರಿಸ್ ಪ್ರೌಢಶಾಲೆಯ ಬಾಲಕಿಯರು ಸ್ಪರ್ಧಿಸಿ ಪ್ರಥಮ ಸ್ಥಾನದಲ್ಲಿ ಜಯಗಳಿಸಿ ಮೂರನೇ ಬಾರಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಸಂಸ್ಥೆಗೂ ಊರಿಗೂ ಕೀರ್ತಿಯನ್ನು ತಂದ ವಿದ್ಯಾರ್ಥಿಗಳಿಗೆ ಶಾಲೆ ವ್ಯವಸ್ಥಾಪಕರು ಪೂಜ್ಯ ಗುರುಗಳು ಡಾಕ್ಟರ್ ಎಂ ವಿನ್ಸೆಂಟ್ ರವರು ಮಕ್ಕಳಿಗೆ ಸನ್ಮಾನಿಸಿ ಶುಭವನ್ನು ಕೋರಿರುತ್ತಾರೆ ಅವರೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರು ಶ್ರೀಯುತ ಆಗಸ್ಟಿನ್ ,ಸಹಶಿಕ್ಷಕಿ ಮರೆಯ ಜ್ಯೋತಿ ಮತ್ತು ಮುಖ್ಯ ಶಿಕ್ಷಕರು ರಾಬರ್ಟ್ ಹಾಜರಿದ್ದರು.