
ಸಂಜೆವಾಣಿ ನ್ಯೂಸ್
ಮೈಸೂರು: ಜ.05:- ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಜ.1ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಬಂಧಿಸಿ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಪ್ರತಿಭಟಿಸಿದರು.
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘ ಜಿಲ್ಲಾಸಮಿತಿ ನಗರದಲ್ಲಿ ರಾಮಸ್ವಾಮಿ ವೃತ್ತದಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟಿಸಿದ ಸಮಿತಿ ಸದಸ್ಯರು ಮಾತುಕತೆ ಮೂಲಕ ಬಗೆಹರಿಸುವ ಬದಲು ಅತ್ಯಂತ ಪೆÇಲೀಸ್ ದೌರ್ಜನ್ಯ ಹಾಗೂ ಹೀನಾಯ ಬಲಪ್ರಯೋಗ ನಡೆಸಿ ಬಂಧಿಸಿ ಕೊಲೆ ಯತ್ನ, ಕೊಲೆ ಬೆದರಿಕೆಯಂತಹ ಮೊಕದ್ದಮೆಗಳನ್ನು ಹೂಡಿರುವುದನ್ನು ಬಲವಾಗಿ ಖಂಡಿಸುತ್ತೇವೆ.
ಇದು ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಸರ್ಕಾರದ ಹತಾಶ ಕ್ರಮವಾಗಿದೆ. ಜನ ವಿರೋಧಿ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಆಗ್ರಹಿಸಿ ಕಳೆದ 106 ದಿನಗಳಿಂದ ಅಹೋರಾತ್ರಿ ಅನಿರ್ಧಾಷ್ಟಾವಧಿ ಧರಣಿಯನ್ನು ಶಾಂತಿಯುತವಾಗಿ ನಡೆಸಿಕೊಂಡು ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಪರಿಣಾಮಕಾರಿಯಾದ ಒತ್ತಡ ಹೇರಲು ನೆನ್ನೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಮನೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರ ಜೊತೆ ಹಾಗೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರರು ಮತ್ತು ಮಹಿಳೆಯರ ಜೊತೆ ಅತ್ಯಂತ ಅನಾಗಿರಕವಾಗಿ ಪೆÇಲೀಸರು ನಡೆದುಕೊಂಡಿದ್ದಾರೆಂದರು.
ಕಾಮ್ರೇಡ್ ಭಗವಾನ್ ರೆಡ್ಡಿ ಸೇರಿ ಬಂಧಿತಗೊಂಡಿರುವ ಎಲ್ಲಾ ನಾಯಕರು ಹಾಗೂ ಹಲವಾರು ಮಹಿಳಾ ಕಾರ್ಯಕರ್ತರನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಮತ್ತು ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತದೆ. ಕೂಡಲೇ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು. ಎಐಕೆಕೆಎಂಎಸ್‍ನ ರಾಜ್ಯ ಅಧ್ಯಕ್ಷ ಎಂ.ಶಶಿಧರ್, ಜನಾಂದೋಲನಗಳ ಮಹಾ ಮೈತ್ರಿಯ ರಾಜ್ಯ ನಾಯಕ ಉಗ್ರನರಸಿಂಹೇಗೌಡ, ಎಐಕೆಕೆಎಂಎಸ್‍ನ ರಾಜ್ಯ ಕಚೇರಿ ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ಎಐಕೆಕೆಎಂಎಸ್‍ನ ಜಿಲ್ಲಾ ಅಧ್ಯಕ್ಷ ಬಸವರಾಜು ಹೆಚ್.ಎಂ. ಎಐಕೆಕೆಎಂಎಸ್‍ನ ಜಿಲ್ಲಾ ಉಪಾಧ್ಯಕ್ಷರಾದ ಕೆಲ್ಲಹಳ್ಳಿ ರಾಮಣ್ಣ, ಶಿವಣ್ಣ ನಾಯಕ, ಮಹೇಶ್, ರೈತ ಮಹಿಳೆಯರಾದ ಜಯಲಕ್ಷ್ಮೀ, ನಾಗಮ್ಮ, ಹೂವಮ್ಮ ಮುಂತಾದವರು ಉಪಸ್ಥಿತರಿದ್ದರು.




























