
ಸಂಜೆವಾಣಿ ವಾರ್ತೆ
ಹೊಸಪೇಟೆ, ಅ.11: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ವಸತಿ ರಹಿತರಿಗೆ ಆಶ್ರಯ ಎಲ್ಲರಿಗೂ ತಲುಪುವಂತಾಗಬೇಕು ಎಂದು ಜನಶಕ್ತಿ ಸ್ವಯಂ ಸೇವಾ ಸಂಸ್ಥೆಯ ಯೋಜನಾ ಸಂಯೋಜಕ ಅನಂತ ಜೋಶಿ ಹೇಳಿದರು.
ಹೊಸಪೇಟೆಯ ನಗರಸಭೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ನಗರಾಭಿವೃದ್ಧಿಕೋಶ, ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಜನಶಕ್ತಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಸತಿ ರಹಿತರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರದ ನಿರ್ದೇಶನದಂತೆ ಹೊಸಪೇಟೆ ನಗರಸಭೆ ತನ್ನ ಜನಸಂಖ್ಯೆಗೆ ಅನುಗುಣವಾಗಿ ಎರಡು ವಸತಿ ರಹಿತರ ಕೇಂದ್ರಗಳನ್ನು ಸುಮಾರು 80 ಜನ ಆಶ್ರಯ ಪಡೆಯಲು ಬೇಕಾದ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಿದೆ ಆದರೆ ಅವುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ವಿವಿಧ ಇಲಾಖೆಗಳು ಸಹಭಾಗೀತ್ವ ಅವಶ್ಯವಾಗಿದೆ ಜನರು ಕೇವಲ ಸ್ವಯಂ ಸೇವಾ ಸಂಸ್ಥೆಗಳು ಪ್ರಚಾರಕ್ಕೆ ಹೋದಾಗ ಅನುಮಾನದಿಂದ ನೋಡುವ ಸಾಧ್ಯತೆಗಳಿವೆ ಪೊಲೀಸ ಇಲಾಖೆ ಇಂತಹ ಕೇಂದ್ರಗಳು ಪರಿಣಾಮ ಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರ ನೀಡಬೇಕು ಇತ್ತೀಜೆಗೆ ಈ ಬಗ್ಗೆ ಜಾಗೃತಿಯಿಂದಾಗಿ ಜನ ಬರುವಂತಾಗುತ್ತಿದೆ ಎಂದರು.
ನಗರಸಭೆಯ ಸಮುದಾಯ ಸಂಘಟನಾಧಿಕಾರಿ ರವಿಕುಮಾರ ಮಾತನಾಡಿ ಹೊಸಪೇಟೆ ನಗರಸಭೆಯ ಎರಡು ಕೇಂದ್ರಗಳಲ್ಲಿ 80 ಜನ ತಂಗಲು ಎಲ್ಲಾ ವ್ಯವಸ್ಥೆಯನ್ನು ಮಾಡಿದೆ ಇದು ಸಂಪೂರ್ಣ ಉಚಿತವಾಗಿದ್ದು ಬೆಡ್ಡು, ಕಾಟು, ಹೊದಿಕೆ ಯುಪಿಎಸ್ ಸೌಕರ್ಯವನ್ನು ಹೊಂದಿದ್ದು ಹೆಚ್ಚಿನ ಪ್ರಚಾರಮಾಡಿ ಜನ ಬಳಕೆ ಮಾಡುವಂತಾಗಬೇಕು, ಯಾರಾದರೂ ವಸತಿ ರಹಿತವಾಗಿ ರಸ್ತೆ, ಬಸ್ ನಿಲ್ದಾಣಗಳಲ್ಲಿ ಎಲ್ಲಂದರಲ್ಲಿ ಮಲಗಿದ್ದು ಕಂಡುಬಂದಲ್ಲಿ ನಗರಸಭೆಗಾಗಲಿ ಅಥವಾ ಸ್ವಯಂ ಸೇವಾ ಸಂಸ್ಥೆಗೆ ಮಾಹಿತಿ ನೀಡಿ ವಸತಿ ದೊರೆಯುವಂತೆ ಮಾಡಬೇಕು ಇದಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಕಾರ ಬೇಕು ಎಂದರು.
ಕಾರ್ಯಕ್ರಮದಲ್ಲಿ ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಾಯಕ ಸಂಚಾರ ಅಧಿಕಾರಿ ಸುಶೀಲಾ, ಆರೋಗ್ಯ ಇಲಾಖೆಯ ಧರ್ಮನಗೌಡ ಪಾಲ್ಗೊಂಡಿದ್ದರು.
ಜನಶಕ್ತಿ ಸ್ವಯಂ ಸೇವಾ ಸಂಸ್ಥೆಯ ಚಂದ್ರಹಾಸ, ಕೇಂದ್ರ ವ್ಯವಸ್ಥಾಪಕ ಜಿ.ಕೆ.ಜೋಶಿ, ವಸತಿ ಕೇಂದ್ರ ಪಾಲಕರಾದ ವಿರೂಪಾಕ್ಷಿ, ಪಾರ್ವತಿ, ಯರಿಸ್ವಾಮಿ, ತರುಣ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.





























