ಹೃದಯ ಮುಟ್ಟುವ ಮನಸ್ಸು ಮಲ್ಲಿಗೆಯೋ ಆಲ್ಬಂ

ಕನ್ನಡ ಸಂಗೀತ ಲೋಕಕ್ಕೆ ಹೊಸ ಮೆರುಗು ಮೂಡಿಸುವ ರೆಟ್ರೋ ಶೈಲಿಯ ಆಲ್ಬಂ ಸಾಂಗ್ ‘ಮನಸು ಮಲ್ಲಿಗೆಯೋ’ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮಧುರ ಸಂಗೀತ, ನೇರ ಭಾವನೆಗಳ ಸಾಹಿತ್ಯ ಮತ್ತು ದೃಶ್ಯಾತ್ಮಕ ಶೈಲಿಯೊಂದಿಗೆ ಈ ಹಾಡು ಮನಸು ಮುಟ್ಟುವ ಅನುಭವ ನೀಡುತ್ತದೆ.

ಸಂಗೀತ ನಿರ್ದೇಶಕ ಹಾಗೂ ಗಾಯಕ ಮಿಲಿಂದ್ ಧರ್ಮಸೇನ ಅವರ ಸಂಗೀತ ಸಂಯೋಜನೆ ಹಾಡಿಗೆ ವಿಶಿಷ್ಟ ಸ್ಪರ್ಶತಂದಿದೆ.
ಹಾಡಿನ ಸಾಹಿತ್ಯವನ್ನು ಮಂಜುನಾಥ್ ರಾವ್ ಅವರು ರಚಿಸಿದ್ದು, ಪ್ರೀತಿಯ ಸೂಕ್ಷ್ಮ ಭಾವನೆಗಳನ್ನು ಸರಳವಾದ ಪದಗಳಲ್ಲಿ ಹೇಳುತ್ತದೆ.

ಪರದೆಯ ಮೇಲೆ ಕೃಷ್ಣ ಬೆಳ್ತಂಗಡಿ ಮತ್ತು ನಾಯಕಿಯಾಗಿ ಕಾವೇರಿ ನಂಜಪ್ಪ ಅವರ ಅಭಿನಯ ಹಾಡಿನ ಭಾವವನ್ನು ಹೆಚ್ಚಿಸಿದೆ.ಇವರಿಬ್ಬರ ನಡುವೆ ಮೂಡಿಬರುವ ಸಹಜ ಕೆಮಿಸ್ಟ್ರಿ ಪ್ರೇಕ್ಷಕರನ್ನು ಹಾಡಿನೊಳಗೆ ಸೆಳೆಯುತ್ತದೆ.

ಕರಣ್ ಪ್ರಸಾದ್ ಅವರ ಛಾಯಾಗ್ರಹಣ ದೃಶ್ಯಗಳಿಗೆ ಮನಮುಟ್ಟುವ ಕಳೆಯನ್ನು ತುಂಬಿದ್ದು, ನಂದು ನಾಚೋ ಅವರ ಸಂಕಲನ ಹಾಡಿನ ರಿದಮ್ ಮತ್ತು ಭಾವನೆಗಳನ್ನು ಮಿಳಿತವಾಗಿ ಕಟ್ಟಿಕೊಡುತ್ತದೆ. ಕೀಬೋರ್ಡ್‌ನಲ್ಲಿ ಶಬ್ಬೀರ್ ಅವರ ಸಂಗೀತ ಸ್ಪರ್ಶ ಹಾಗೂ ಧ್ವನಿ ಸಂಯೋಜಕ ಸತೀಶ್ ಬಾಬು ಅವರ ತಂತ್ರಜ್ಞಾನದ ನೈಪುಣ್ಯ ಹಾಡಿಗೆ ಗುಣಮಟ್ಟದ ಮೆರುಗು ನೀಡಿದೆ.

ಒಟ್ಟಾರೆ, ‘ಮನಸು ಮಲ್ಲಿಗೆಯೋ’ ಒಂದು ಸೊಗಸಾದ ಪ್ರೇಮಕಾವ್ಯದಂತೆ ಮೂಡಿಬಂದಿದ್ದು, ಕನ್ನಡ ಆಲ್ಬಂ ಸಂಗೀತ ಪ್ರಿಯರಿಗೆ ಖಂಡಿತ ಮೆಚ್ಚುಗೆ ಗಳಿಸುವ ಭರವಸೆ ಮೂಡಿಸಿದೆ.