ಹುಲಿ ದಾಳಿಯಿಂದ ಮೃತಪಟ್ಟ ಮನೆಗೆ ಹಾಡ್ಯ ರವಿ ಭೇಟಿ-ಶಾಂತ್ವಾನ

ಸಂಜೆವಾಣಿ ವಾರ್ತೆ
ನಂಜನಗೂಡು: ನ.03:-
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಹಾಡ್ಯ ರವಿ ಅವರ ಸಮ್ಮುಖದಲ್ಲಿ ಸರಗೂರು ತಾಲೂಕಿನಲ್ಲಿ 26 ನೇ ತಾರೀಕು ಹುಲಿ ದಾಳಿಗೆ ಹತ್ಯೆ ಆಗಿರುವ ಮುಳ್ಳೂರಿನ ರಾಜಶೇಖರಪ್ಪ ಅವರ ಕುಟುಂಬ ದವರನ್ನು ಭೇಟಿ ನೀಡಿ ಅವರ ಮಗನಾದ ಶಿವು ಮತ್ತು ಅವರ ಪತ್ನಿ ಹಾಗೂ ಅವರ ಕುಟುಂಬದವರಿಗೆ ಶಾಂತ್ವಾನ ಹೇಳಿ ಧೈರ್ಯ ತುಂಬಿದರು.
ರಾಜ್ಯಾಧ್ಯಕ್ಷರಾದ ಹಾಡ್ಯ ರವಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹುಲಿ ದಾಳಿಗೆ ಹಲವಾರು ಮಂದಿ ಕಾಡಂಚಿನ ಗ್ರಾಮದ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಅವರ ಕುಟುಂಬ ಬೀದಿ ಪಾಲಾಗುತ್ತಿದೆ ಸರ್ಕಾರ ಸತ್ತ ಕುಟುಂಬಕ್ಕೆ ಪರಿಹಾರ ನೀಡಬಹುದು ಆದರೆ ಮತ್ತೆ ಜೀವ ಬರುವುದೇ ಆದ್ದರಿಂದ ಶಾಶ್ವತ ಪರಿಹಾರ ಮಾಡಿ ಪ್ರಾಣಿಗಳಿಂದ ಕುಟುಂಬಗಳನ್ನು ಕಾಪಾಡಬೇಕು ಪರಿಹಾರ ಜೊತೆಗೆ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯ ಮಾಡಿದರು.


ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ಪದಾಧಿಕಾರಿಗಳಾದ ಡಿ ಜಿ ನಂದೀಶ್ ದೇವಿರಮ್ಮನಹಳ್ಳಿ, ರಾಜ್ಯ ಗೌರವಾಧ್ಯಕ್ಷರು ಅಂಡುವಿನಹಳ್ಳಿ ಮರಿ ಸೋಮಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್, ತಾಲೂಕು ಅಧ್ಯಕ್ಷರಾದ ಅಂಬಳೆ ಮಹದೇವಸ್ವಾಮಿ ತಾಲೂಕು ಸಂಘಟನಾ ಕಾರ್ಯದರ್ಶಿ ಸಿದ್ದರಾಜು ಅಂಡ್ವಿನಹಳ್ಳಿ ಶಿವಣ್ಣ ದೇವಿರಮ್ಮನಹಳ್ಳಿ ಲೋಕೇಶ್ ಕಾರ್ಯದರ್ಶಿ ಶಿವಮೂರ್ತಿ ಸಿಂಧುಹಳ್ಳಿಪುರ ಬೀರಪ್ಪ ಮಹೇಶ್ ಕುರಹಟ್ಟಿ ಗುರುಸ್ವಾಮಿ ಅಂಬಳೆ ಮಂಜುನಾಥ್ ಇನ್ನು ಮುಂತಾದವರು 40ಕ್ಕೂ ಹೆಚ್ಚು ಮುಖಂಡರು ರಾಜಶೇಖರಪ್ಪ ಮನೆಗೆ ಭೇಟಿ ನೀಡಿದರು.