
ಬೆಂಗಳೂರು, ನ.9:- ಹಾರೋಬೆಲೆ ಅಣೆಕಟ್ಟಿನ ಹಿನ್ನೀರಿನಲ್ಲಿ ಎರಡು ಆನೆಗಳು ಮುಳುಗಿ ಸಾವನ್ನಪ್ಪಿವೆ. ಕನಕಪುರ ತಾಲ್ಲೂಕಿನ ಕೋಣೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ದಕ್ಷಿಣ ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಕೋಣೂರು ಗ್ರಾಮದ ಹಾರೋಬೆಲೆ ಅಣೆಕಟ್ಟಿನಲ್ಲಿ ಎರಡು ಆನೆಗಳು ಮುಳುಗಿ ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಮೂರು ದಿನಗಳ ಹಿಂದೆ ಮೂರು ಆನೆಗಳು ಗ್ರಾಮಕ್ಕೆ ಪ್ರವೇಶಿಸಿವೆ. ನೀರಿನ ಸುಳಿಗೆ ಸಿಲುಕಿದ ಎರಡು ಆನೆಗಳು ಮುಳುಗಿ ಸಾವನ್ನಪ್ಪಿವೆ. ಈ ಘಟನೆ ಕೂನೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.




























