
ಸಂಜೆವಾಣಿ ನ್ಯೂಸ್
ಮೈಸೂರು: ಜೂ.02:- ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಬೆನ್ನಿಗೆ ಚೂರಿ ಹಾಕಿz್ದÁರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೇಳಿಕೊಂಡು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿz್ದÁರೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯ ಲಾಭÀಕ್ಕಾಗಿ ಹಿಂದುಳಿದ ವರ್ಗಗಳನ್ನು ಬಳಸಿಕೊಂಡಿz್ದÁರೆ. ಮಾತೆತ್ತಿದರೆ ಅಕ್ಕಿ ಕೊಟ್ಟೇ ಎಂದು ಹೇಳುತ್ತಾರೆ. ಆದರೆ ದೇವರಾಜ ಅರಸು ಅವರು ಉಳುವವರಿಗೆ ಭೂಮಿ ಕೊಟ್ಟರು. ಹಿಂದುಳಿದ ವರ್ಗಗಳ ವೀರಪ್ಪ ಮೋಯ್ಲಿ, ಬಂಗಾರಪ್ಪ, ವಿಶ್ವನಾಥ್ ಸೇರಿದಂತೆ ಅನೇಕ ನಾಯಕರನ್ನು ಬೆಳೆಸಿದರು. ದೇವರಾಜ ಅರಸು ಅವರೇ ನಿಜವಾದ ಹಿಂದುಳಿದ ವರ್ಗಗಳ ನಾಯಕರು. ಸಿಎಂ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುತ್ತಾರೆ ಅಷ್ಟೇ. ಆದರೆ ಈವರೆಗೆ ಯಾವೊಬ್ಬ ಹಿಂದುಳಿದ ವರ್ಗದ ನಾಯರನ್ನು ರಾಜಕೀಯವಾಗಿ ಬೆಳೆಸಿಲ್ಲ. ಈ ಮೂಲಕ ಹಿಂದುಳಿದ ವರ್ಗಗಳ ಜನರಿಗೆ ದ್ರೋಹ ಮಾಡಿರುವ ಸಿದ್ದರಾಮಯ್ಯ ಅವರನ್ನು ಜನರು ಧಿಕ್ಕರಿಸಬೇಕು ಎಂದು ಕಿಡಿಕಾರಿದರು.
ಹಿಂದುಳಿದ ವರ್ಗದಲ್ಲಿ 108 ಸಮುದಾಯಗಳಿವೆ. ಆದರೆ, ಹಿಂದುಳಿದ ವರ್ಗಗಳ ಹೆಸರಿನಲ್ಲಿ ಕುರುಬ ಸಮುದಾಯ ಮತ್ತು ಈಡಿಗ ಸಮುದಾಯವಷ್ಟೇ ಲಾಭÀ ಪಡೆದುಕೊಂಡಿವೆ. ಉಳಿದ ಸಮುದಾಯಗಳು ವಂಚನೆಗೆ ಒಳಗಾಗಿವೆ. ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು, ಉಳಿದ 106 ಸಮುದಾಯದ ಯಾವ ವ್ಯಕ್ತಿಯನ್ನು ಶಾಸಕರು, ಎಂಎಲ್‍ಸಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗದವರಿಗೆ ನ್ಯಾಯ ಒದಗಿಸುತ್ತೇನೆ ಎಂದು 160 ಕೋಟಿ ಖರ್ಚು ಮಾಡಿ ಮಾಡಿಸಿದ್ದ ಜಾತಿ ಗಣತಿ ವರದಿಯನ್ನು ಕಸದ ಬುಟ್ಟಿಗೆ ಎಸೆದಿದ್ದೀರಿ. 160 ಕೋಟಿ ರೂ. ನಷ್ಟವನ್ನು ತುಂಬುವವರು ಯಾರು? ತಮ್ಮ ಸುತ್ತ ಭÀ್ರಷ್ಟರನ್ನೇ ಇಟ್ಟುಕೊಂಡು ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಅಧÀ್ಯP್ಷÀ ಕುಂಬ್ರಳ್ಳಿ ಸುಬ್ಬಣ್ಣ, ನಗರ ಹಿಂದುಳಿದ ವರ್ಗದ ಅಧÀ್ಯP್ಷÀ ಮೈ.ಕು.ರಾಜೇಶ್, ಜಿಲ್ಲಾ ವಕ್ತಾರ ದಯಾನಂದ್ ಪಟೇಲ್, ನಗರ ಮಾಧÀ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಮಾಧÀ್ಯಮ ಸಂಚಾಲಕ ಸಂತೋಷ್ ಕುಮಾರ್ ಇದ್ದರು.