ಹಿಂದಿ ದಿನಾಚರಣೆ, ವಿಶೇಷ ಉಪನ್ಯಾಸ

ಸಂಜೆವಾಣಿ ನ್ಯೂಸ್
ಮೈಸೂರು:ಸೆ.19:-
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಿಂದಿ ಭಾಷೆಯ ಮೂಲಕವೇ ದೇಶವನ್ನು ಒಗ್ಗೂಡಿಸಿ, ಆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸುವಂತೆ ಮಾಡುವಲ್ಲಿ ಯಶಸ್ವಿಯಾದರು ಎಂದು ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಇರ್ಷಾದ್ ತಿಳಿಸಿದರು.


ನಗರದ ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್‍ನಲ್ಲಿ ಮೈಸೂರು ವಿವಿ ಹಿಂದಿ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ಹಿಂದಿ ದಿನಾಚರಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಒಂದು ಭಾಷೆಗೆ ಭಾವನಾತ್ಮಕ ಸಂಬಂಧ ಬೆಸೆಯುವ ಶಕ್ತಿ ಇರುತ್ತದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಮನ್‍ಕೀ ಬಾತ್‍ನಲ್ಲಿ ಹಿಂದಿ ಭಾಷೆಯ ಮೂಲಕವೇ ಅವರ ಭಾವನೆಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದರು.


ನಮ್ಮ ಮಾತೃಭಾಷೆ ಯಾವುದೇ ಇರಲಿ ಅದನ್ನು ಗೌರವಿಸುವುದು ನಮ್ಮ ಕರ್ತವ್ಯ. ಹಾಗೆಯೇ ರಾಷ್ಟ್ರಭಾಷೆಯನ್ನೂ ನಾವು ಪ್ರೀತಿಸಬೇಕು. ಮಾತೃ ಭಾಷೆ ಇಲ್ಲಿ ನಮಗೆ ಬದುಕು ಕೊಟ್ಟರೆ, ರಾಷ್ಟ್ರ ಭಾಷೆ ದೇಶವ್ಯಾಪಿ ನಮಗೆ ಬದುಕು ನೀಡಬಲ್ಲದು ಎಂದು ಹೇಳಿದರು.


ಮಹಾರಾಜ ಕಾಲೇಜು ನನ್ನ ಕರ್ಮ ಭೂಮಿ. ಇಲ್ಲಿ ಕುವೆಂಪು ಸೇರಿದಂತೆ ಹಲವಾರು ಮಹನೀಯರು ಓಡಾಡಿದ್ದಾರೆ. ಇಂತಹ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದು ನಿಮ್ಮ ಪುಣ್ಯ. ವಿದ್ಯೆ ಕೊಟ್ಟ ಗುರು, ಬುದ್ದಿ ಕೊಟ್ಟ ತಂದೆ, ತುತ್ತು ಕೊಟ್ಟ ತಾಯಿ ಹಾಗೂ ಬೆಳೆದ ಪರಿಸರವನ್ನು ಯಾರು ಮರೆಯುವುದಿಲ್ಲವೋ ಅವರು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದರು.


ಕಾಲೇಜಿನ ಪ್ರಾಂಶುಪಾಲ ಪೆÇ್ರ.ಎಚ್.ಸಿ.ದೇವರಾಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ.ಬಸವರಾಜ್ ಕೆ.ಬಾರಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುವೆಂಪು ಪ್ರೌಢಶಾಲೆ ಹಿಂದಿ ಸಹ ಶಿಕ್ಷಕ ಯೂನಸ್ ಷರೀಫ್, ಕಾಲೇಜಿನ ಆಡಳಿತಾಧಿಕಾರಿ ಪೆÇ್ರ.ಕೆ.ತಿಮ್ಮಯ್ಯ, ಪ್ರಾಧ್ಯಾಪಕ ಪೆÇ್ರ.ಇ.ಸಿ.ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.