
ಸಂಜೆವಾಣಿ ವಾರ್ತೆ
ಹನೂರು ನ 15 :- ಮಲೆ ಮಹದೇಶ್ವರ ವನ್ಯಜೀವಿ ವಲಯ ವಿಭಾಗಕ್ಕೆ ರಾಮಾಪುರ ವಲಯದ ಮಾರ್ಟಳ್ಳಿ ಹಾಲೇರಿ ಕೆರೆಗೆ ಅರಣ್ಯ ಇಲಾಖೆಯ ಅನುಧಾನದಲ್ಲಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಉಳು ತೆಗೆಸುವುದು ಉಳು ತೆಗೆಸುವ ಕಾರ್ಯಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಅವರು ಚಾಲನೆ ನೀಡಿದರು.
ಇದೆ ವೇಳೆ ಶಾಸಕ ಎಂ. ಆರ್ ಮಂಜುನಾಥ್ ಅವರು ಮಾತನಾಡಿ ಕೆರೆಗೆ ನೀರು ತುಂಬುವುದರಿಂದ ಕಾಡು ಪ್ರಾಣಿಗಳಿಗೆ ಮತ್ತು ಈ ಭಾಗದ ರೈತರಿಗೆ ಬಹಳ ಅನುಕೂಲವಾಗಲ್ಲಿದೆ. ತಾಲೂಕಿನ ಮಾರ್ಟಳ್ಳಿ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾಗಿದ್ದ ಕಾಡಂಚಿನ ಭಾಗವಾದ ಅಲೇರಿ ಕೆರೆಗೆ ಉಳು ತೆಗೆಸಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.
ಅಲೇರಿಕೆರೆ ಅಚ್ಚುಕಟ್ಟು ಸುಮಾರು 10 ಸಾವಿರ ಎಕರೆ ಬಿದರಳ್ಳಿ ,ವಡ್ಡರದೊಡ್ಡಿ, ಸೆಲ್ವಾ ನಗರ, ಏರಿಕಾಡು, ಹಳೆ ಮಾರ್ಟಳ್ಳಿ, ತಂಡಮೇಡು, ಕೋಟಪೆÇೀದೆ,ಮೆಟುತೆರು ಸುಲ್ವಾಡಿ, ಸಂದನಪಾಳ್ಯ, ಹಾಗೂ ಇನ್ನಿತರ ಪ್ರದೇಶಗಳ ರೈತರಿಗೆ ಅನುಕೂಲವಗಳಿದ್ದು, ಈ ಭಾಗದ ರೈತರು ಗುಳ್ಳೆ ಹೋಗುವುದನ್ನು ನಿಲ್ಲಿಸಿ ಇಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಉಪಯೋಗವಾಗುತ್ತದೆ.
ಈ ಭಾಗದ ರೈತರು ಹೆಚ್ಚು ಹೈನುಗಾರಿಕೆಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು ಆಲೇರಿಕೆರೆಯನ್ನು ಉಳು ತೆಗೆಸಿ ನೀರು ತುಂಬಿಸುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದ್ದು ಇದನ್ನು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಇದೆ ಸಂದರ್ಭದಲ್ಲಿ ಡಿ.ಸಿ.ಫ್ ಭಾಸ್ಕರ್ ಎ.ಸಿ.ಫ್ ವಿರಾಜ್, ಆರ್.ಎಫ್.ಓ ರಾಜಶೇಖರ್, ಮುಖಂಡರುಗಳಾದ ಮಂಜೇಶ್ ಗೌಡ,ಡಿ ಆರ್ ಹಾಡ್ರ್ವೇರ್ ಸೀನಪ್ಪ, ಮಣಿ, ಜಪ ಮಾಲೆ, ಗೋಪಾಲ್ ನಾಯ್ಕ, ವಿಜಯ್ ಕುಮಾರ್, ಎಸ್.ಆರ್ ಮಹದೇವ್, ನಟರಾಜು, ಹಾಗೂ ಇನ್ನಿತರರು.


























