ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರು ಪ್ರದರ್ಶನ

ಹನೂರು: ಜ.28:– ಮಳೆ ಇಲ್ಲದೆ ಕೃಷಿಯಲ್ಲಿ ಹಿನ್ನಡೆಯಾದ ರೈತರಿಗೆ ಹೈನುಗಾರಿಕೆ ಕೈ ಹಿಡಿದಿದೆ. ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಿ ರೈತರಿಗೆ ಉತ್ತೇಜನೆ ನೀಡಿ ಹೈನುಗಾರಿಕೆಗೆ ಹೆಚ್ಚಿನ ಪೆÇ್ರತ್ಸಾಹ ನೀಡಬೇಕಿದೆ. ಜೊತೆಗೆ ಮೇಕೆ ಕುರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಸಾಕಾಣಿಕೆ ಮಾಡಲು ಪೆÇ್ರೀತ್ಸಾಹ ನೀಡಬೇಕಾಗಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ಅವರು ತಿಳಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಚಾ.ನಗರ ಮತ್ತು ಚಾ.ನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅಧಿಕ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಾಲು ಕರೆಯುವ ಸ್ಪರ್ಧೆ ಅರ್ಥಪೂರ್ಣ ವಾಗಿದ್ದು ಹೆಚ್ಚು ಹಾಲು ಕೊಡುವ ಹಸುವಿಗೆ ಬಹುಮಾನ ನೀಡುವ ಮೂಲಕ ರೈತರಿಗೆ ಉತ್ತೇಜನ ನೀಡಬೇಕು. ಜಿಲ್ಲಾ ಕೇಂದ್ರದಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮ ಮಾಡಿದ್ದು ರೈತರ ಆರ್ಥಿಕತೆ ಹೆಚ್ಚಿಸುವ ಉದ್ದೇಶದಿಂದ ಚರ್ಚೆ ನಡೆದಿದೆ. ವಿಧ್ಯಾ ಅರ್ಹತೆಗೆ ತಕ್ಕಂತೆ ಉಧ್ಯೋಗ ಇಲ್ಲದ ಯುವಕರ ತಂದೆ ತಾಯಿಗೆ ಹೊರೆಯಾಗದೆ ಹೈನುಗಾರಿಕೆ ಮಾಡಿದರೆ ಜೀವನಕ್ಕೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.

ತಾಲೂಕು ಪಶು ವೈದ್ಯಾಧಿಕಾರಿ ಸಿದ್ದರಾಜು ಮಾತನಾಡಿ ನಮ್ಮ ಜಿಲ್ಲೆಯಲ್ಲಿ ನಮ್ಮ ಹನೂರು ತಾಲೂಕು ಹಾಲು ಉತ್ಪಾದಕರ ಸಂಘ ಉತ್ತಮವಾಗಿ ನಡೆಯುತ್ತಿದೆ ಉತ್ತಮ ಗುಣಮಟ್ಟ ಹಾಲು ಬರುತ್ತದೆ. ನಮ್ಮ ಒಕ್ಕೂಟದಿಂದ ಎಲ್ಲಾ ಸಹಕಾರವನ್ನು ನೀಡಲಾಗುವುದು. ಮತ್ತು ನಮ್ಮ ಹನೂರು ಕ್ಷೇತ್ರ ಮೂರು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದ ಕಾರಣ ನಮ್ಮ ರೈತಾಪಿ ಬಂಧುಗಳು ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದರು ನಮ್ಮ ಪಶು ಇಲಾಖೆ ವತಿಯಿಂದ ಸರ್ಕಾರದಿಂದ ಬರುವಂತಹ ಸೌಲಭ್ಯವನ್ನು ಸಮರ್ಪಕವಾಗಿ ವಿತರಿಸಿದ್ದೇವೆ.
ತಾಲೂಕಿನಲ್ಲಿ ಪಶು ಆಸ್ಪತ್ರೆ 12 ಇದ್ದು ಅಲ್ಲಿಗೆ ವೈದರಿಗಾರಿಗಳು ಮತ್ತು ಸಿಬ್ಬಂದಿಗಳ ಕೊರತೆ ಇದೆ ನಮ್ಮ ತಾಲೂಕಿನಲ್ಲಿ 37 ಸಾವಿರ ನಾಟಿ ದನ ಇದೆ. 22 ಸಾವಿರ ಇಲಾಚಿ ಧನ. ಕುರಿ 21,000.ಮೇಕೆ 59000. 2800 ಎಮ್ಮೆ. ಇದೆ ಎಲ್ಲ ದನ ಕರುಗಳಿಗೆ ಜ್ವರ ಬಂದ ಸಂದರ್ಭದಲ್ಲಿ ಲಸಿಕೆ ಹಾಕಲು ತುಂಬಾ ತೊಂದರೆಯಾಗುತ್ತಿದೆ. ಅಜ್ಜಿಪುರ. ಕೊರಟ್ಟಿ ಹೊಸೂರು. ಮಂಗಲ. ಪಿಜಿ ಪಾಳ್ಯ. ಎಲ್ಲಾ ಗ್ರಾಮಗಳಿಗೆ ಪಶು ವೈದ್ಯಕೀಯ ಆಸ್ಪತ್ರೆಯ ಅವಶ್ಯಕತೆ ಇದೆ ಎಂದು ಶಾಸಕರ ಗಮನಕ್ಕೆ ತಂದರು.

ತೋಮಿಯರ್ ಪಾಳ್ಯ ಗ್ರಾಮದ ಪತ್ತಿನಾಥನ್ ಮುದಲಮುತ್ತು ಎಂಬುವವರು ಹಸು 33.65 ಕೆಜಿ ಹಾಲು ನೀಡುವ ಮೂಲಕ ಪ್ರಥಮ ಬಹುಮಾನ ಪಡೆದರೆ ಎರಡನೇ ಬಹುಮಾನವನ್ನು ನಂಜೇ ಒಡೆಯರ್ ದೊಡ್ಡಿ ಗ್ರಾಮದ ಶಿವಮೂರ್ತಿ ಗುರುಮಲ್ಲಪ್ಪ ಎಂಬುವ ಹಸು 32.58 ಕೆಜಿ ಹಾಲನ್ನು ನೀಡಿದೆ. ಹಾಗೆಯೇ ಮೂರನೇ ಬಹುಮಾನವನ್ನು ಕೆ.ಗುಂಡಪುರ ಗ್ರಾಮದ ಆನಂದ್ ಕುಮಾರ್ ಕೃಷ್ಣೇಗೌಡ ಎಂಬುವರ ಹಸು 29.98 ಕೆಜಿ ಹಾಲು ಹಾಕಿ ಪಡೆದಿರುತ್ತಾರೆ. ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ರತರಿಗೂ ಸಮಾಧಾನಕರ ಬಹುಮಾನವಾಗಿ ಹಾಲಿನ ಕ್ಯಾನ್ ವಿತರಣೆ ಮಾಡಲಾಯಿತು.