
ಸಂಜೆವಾಣಿ ವಾರ್ತೆ
ಹನೂರು ಫೆ 11 :- ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಇಂದು ಮಂಗಳವಾರ ಬೆಳಿಗ್ಗೆ 11-00 ಗಂಟೆಯ ವೇಳೆ ಹಾಡುಹಗಲೇ ನಡೆದಿರುವುದು ಮಲೆ ಮಾದಪ್ಪನ ಭಕ್ತರನ್ನೆ ಬೆಚ್ಚಿಬಿಳಿಸುವಂತೆ ಮಾಡಿದೆ.
ಚನ್ನಪಟ್ಟಣ ತಾಲ್ಲೂಕಿನ ಭುವಳ್ಳಿ ಗ್ರಾಮದ ಬಾಲಕ ಶ್ರೇಯಸ್ (8 ವರ್ಷ) ಚಿರತೆ ದಾಳಿಯಿಂದ ಗಾಯಗೊಂಡು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಅದರಂತೆ ಪಾದಯಾತ್ರೆಯ ಮೂಲಕ ಪೆÇನ್ನಾಚಿ ಕ್ರಾಸ್‍ನಿಂದ ತಲುಪಿ ನಂತರ ಮುಂದೆ 7ನೇ ತಿರುವು ಮಾರ್ಗ ಅರಣ್ಯ ಪ್ರದೇಶದಲ್ಲಿ ತೆರಳುತ್ತಿದ್ದಾಗ ಬಾಲಕನೋರ್ವನ ಮೇಲೆ ಚಿರತೆ ದಾಳಿ ಮಾಡಿದೆ.
ಈ ವೇಳೆ ಬಾಲಕನ ಕಿರುಚಾಟ ಪಾದಯಾತ್ರಿಕರ ಕಿರುಚಾಟದಿಂದ ಕ್ಷಣಾರ್ಧದಲ್ಲೇ ಚಿರತೆ ಅಲ್ಲಿಂದ ಓಡಿ ಹೋಗಿದೆ. ಅದೃಷ್ಟವಶಾತ್ ಬಾಲಕ ಪ್ರಾಣಪಾಯದಿಂದ ಪಾರಾಗಿ ಬದುಕುಳಿದಿದ್ದಾನೆ. ಗಾಯಗೊಂಡಿದ್ದ ಬಾಲಕನನ್ನು ಜೊತೆಯಲ್ಲಿದ್ದ ಭಕ್ತಾದಿಗಳು ಬಸ್ಸಿನ ಮೂಲಕ ಮಲೆ ಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ.
ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರಿಗೆ ಒಂದು ಬೃಹತ್ ಗಾತ್ರದ ಚಿರತೆ ಹಾಗೂ ಒಂದು ಚಿಕ್ಕ ಚಿರತೆ ಕಾಣಿಸಿಕೊಂಡಿದೆ. ಭಕ್ತಾದಿಗಳು ಅರಣ್ಯ ಪ್ರದೇಶದ ಮೆಟ್ಟಿಲುಗಳ ಮೂಲಕ ಹೋಗುವ ಬದಲು ಮುಖ್ಯ ರಸ್ತೆಯ ಮೂಲಕ ಪಾದಯಾತ್ರೆ ಮಾಡಿದರೆ ಸುರಕ್ಷತೆ ಇರಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಪೆÇಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಜಗದೀಶ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಚಿರತೆ ಇರುವ ಪ್ರದೇಶವನ್ನು ಗುರುತಿಸಿ ಅದನ್ನು ಕಾಡಿನಲ್ಲಿ ಓಡಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಗುತ್ತಿದೆ. ಜೊತೆಗೆ ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿ ಪೆÇಲೀಸ್ ಸಿಬ್ಬಂದಿಗಳು ಹಾಜರಿದ್ದು ಭಕ್ತರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.






























