
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.26: ಹವಾಮಾನ ವೈಪರೀತ್ಯದಿಂದಾಗಿ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಅವರ ಹೆಲಿಕಾಪ್ಟರ್ ಹಾರದ ಕಾರಣ ಅವರು ರಾಯಚೂರಿಗೆ ತೆರಳಲು ಸಾಧ್ಯವಾಗಲಿಲ್ಲ ಇಂದು.
ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಅವರು
ಬೆಂಗಳೂನಿಂದ ವಿಮಾನದಲ್ಲಿ ತೋರಣಗಲ್ಲಿನ ಜಿಂದಾಲ್ ಏರ್ಪೋರ್ಟ್ ಗೆ ಆಗಮಿಸಿ ಇಲ್ಲಿಂದ ಹೆಲಿಕಾಪ್ಟರ್ ಮೂಲಕ ತೆರಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆ ಹೆಲಿಕಾಪ್ಟರ್ ಹಾರಲು ಅನುಕೂಲವಾಗಲಿಲ್ಲ. ಹೀಗಾಗಿ ಬಂದ ವಿಶೇಷ ವಿಮಾನದ ಮೂಲಕ ಅವರು ವಾಪಸ್ ಹೋರಟರು.
