Home ಜಿಲ್ಲೆ ಮಂಗಳೂರು ಹವಾಮಾನ ರಾಯಭಾರಿ ಉಪೇಂದ್ರ ತ್ರಿಪಾಠಿ ಪುತ್ತೂರಿಗೆ ಭೇಟಿ

ಹವಾಮಾನ ರಾಯಭಾರಿ ಉಪೇಂದ್ರ ತ್ರಿಪಾಠಿ ಪುತ್ತೂರಿಗೆ ಭೇಟಿ

filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಕಾಡು-ಹಸಿರು ರಕ್ಷಣೆಗೆ ನಾವು ಬದ್ಧರಾಗಬೇಕು-
ಪುತ್ತೂರು; ರಾಜ್ಯ ಮುಖ್ಯಮಂತ್ರಿ ಅವರ ಗೌರವ ಸಲಹೆಗಾರ ಹಾಗೂ ಕರ್ನಾಟಕ ರಾಜ್ಯ ಹವಾಮಾನ ರಾಯಭಾರಿಯಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ಅವರು ಗುರುವಾರ ಪುತ್ತೂರು ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿದರು.
೧೯೮೨-೮೪ ತನಕ ಪುತ್ತೂರು ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದ ಉಪೇಂದ್ರ ತ್ರಿಪಾಠಿ ಅವರು ಮೂಲತಾ ಒರಿಸ್ಸಾದವರು. ಪ್ರಸ್ತುತ ರಾಜ್ಯ ಹವಾಮಾನ ರಾಯಭಾರಿಯಾಗಿದ್ದು, ಈ ಬಗ್ಗೆ ಬುಧವಾರ ಮಂಗಳೂರಿನ ಸುರತ್ಕಲ್ ನಲ್ಲಿ ಸಭೆ ನಡೆಸಿ ಹವಾಮಾನದ ವೈಪರೀತ್ಯ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಪುತ್ತೂರಿಗೆ ಭೇಟಿ ನೀಡಿದ ಅವರು ತಾಲೂಕು ಆಡಳಿತ ಸೌಧ, ಬಿರುಮಲೆ ಗುಡ್ಡ, ಕ್ಯಾಂಪ್ಕೋ ಸಂಸ್ಥೆ, ಡಾ.ಶಿವರಾಮ ಕಾರಂತರ ಪರ್ಲಡ್ಕದ ಬಾಲವನ ಮತ್ತಿತರ ಪ್ರದೇಶಗಳನ್ನು ವೀಕ್ಷಿಸಿದರು.
ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಗಿಡ ನೆಡುವ ಮೂಲಕ ಪ್ರಕೃತಿಯ ರಕ್ಷಣೆ ಅಗತ್ಯ ಎಂಬ ಸಂದೇಶ ನೀಡಿದರು.
ಪುತ್ತೂರು ಸಹಾಯಕ ಆಯುಕ್ತರಾಗಿದ್ದ ಸಮಯವನ್ನು ಮೆಲುಕು ಹಾಕಿದ ಅವರು ಈಗ ಪುತ್ತೂರು ತುಂಬಾ ಅಭಿವೃದ್ಧಿಯಾಗಿದೆ. ಸಾಕಷ್ಟು ವ್ಯವಸ್ಥೆಗಳು ಇಲ್ಲಿ ನಿರ್ಮಾಣವಾಗಿದೆ. ಆಗ ಪುಟ್ಟ ಪಟ್ಟಣವಾಗಿದ್ದ ಪುತ್ತೂರು ಈಗ ಬೃಹತ್ ಪಟ್ಟಣವಾಗಿ ರೂಪುಗೊಂಡಿದೆ. ಬಿರುಮಲೆ ಗುಡ್ಡದಲ್ಲಿ ಆಗ ಹಸಿರೇ ಇರಲಿಲ್ಲ. ಈಗ ಹಸಿರು ತುಂಬಿ ನಿಂತಿದೆ ಎಂದ ಅವರು ತಾನು ಸಹಾಯಕ ಆಯುಕ್ತರಾಗಿದ್ದ ಸಮಯದಲ್ಲಿ ಎಸಿ ಕಚೇರಿಯ ಭಾಗದಲ್ಲಿ ನೆಟ್ಟ ಎರಡು ತೆಂಗಿನ ಮರಗಳು ಈಗಲೂ ಇದೆ ಎಂದು ಹೇಳಿದರು.
ಹವಾಮಾನ ವಿಚಾರದಲ್ಲಿ ಅವರು ಮಾತನಾಡಿ, ಸಾಕಷ್ಟು ಬದಲಾವಣೆಗಳಾಗಿವೆ. ಪುತ್ತೂರು ಸೇರಿದಂತೆ ಜಿಲ್ಲೆ ಮಳೆಯನಾಡು ಎಂದೇ ಪ್ರಸಿದ್ಧಿ. ಆದರೆ ಈಗ ಇಲ್ಲೂ ಮಳೆಯ ಅಭಾವ ಕಂಡುಬಂದಿದೆ. ಇದಕ್ಕೆಲ್ಲಾ ಕಾಡು-ಹಸಿರು ನಾಶವಾಗಿರುವುದು ಕಾರಣವಾಗಿದೆ. ಈಗ ಪ್ರಾರಂಭವಾಗಿರುವ ಎಲ್‌ನಿನೊ ಭವಿಷ್ಯದಲ್ಲಿ ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡುವ ಅವಕಾಶ ಇದೆ. ಹಾಗಾಗಿ ಕಾಡು-ಹಸಿರು ರಕ್ಷಣೆಗೆ ನಾವು ಬದ್ಧರಾಗಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಪೌರಾಯುಕ್ತೆ ವಿದ್ಯಾ ಕಾಳೆ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ಹಾಗೂ ಸಹಾಯಕ ಆಯುಕ್ತರ ಕಚೇರಿ ಸಿಬಂದಿಗಳು ಭಾಗವಹಿಸಿದ್ದರು.