
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ,26- ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ವೀರಶೈವ ಮಹಾವಿದ್ಯಾಲಯದಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ 2025-26ನೇ ಸಾಲಿನ ಶಿಬಿರವನ್ನು ಕೊಟ್ಟೂರು ಸ್ವಾಮಿ ಮಠ, ಸೋಮಸಮುದ್ರ ಹಳ್ಳಿಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಅಕ್ಕಿ ಶಿವರಾಜ್, ಕಾರದಪುಡಿ ಮುದ್ದನಗೌಡ ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಪರಶುರಾಮ್, ಕಾಲೇಜಿನ ಪ್ರಾಂಶುಪಾಲರಾದ .ಜಿ.ಮಲ್ಲನಗೌಡ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ವಿನೋದುಕುಮಾರ್, ಯು.ಸೋಮಶೇಖರ್ ನಿವೃತ್ತ ಶಿಕ್ಷಕರು ಪಾಲ್ಗೊಂಡಿದ್ದರು ವಿದ್ಯಾರ್ಥಿ ಜೀವನದಲ್ಲಿ ತುಂಬಾ ಪಾತ್ರ ವಹಿಸುತ್ತದೆ. ಸೇವೆಯ ಮನೋಭಾವ, ತ್ಯಾಗ ಮತ್ತು ಪರಿಶ್ರಮದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಹಳ್ಳಿಗಳು ಉದ್ದಾರ ಆದ್ರೆ ದೇಶ ಉದ್ದಾರ ಆಗುತ್ತದೆ ಎಂದು ಸ್ವಯಂ ಸೇವಕರಿಗೆ ತಮ್ಮ ಭಾಷಣದಲ್ಲಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಡಾ.ಭ್ರಮರಾಂಭ ವೈ ಸ್ವಾಗತಿಸಿದರು. ಪ್ರತಿಜ್ಞಾ ವಿಧಿಯನ್ನು ಕುಮಾರಿ. ಕೀರ್ತನ, ಬಿ.ಎಸ್.ಸಿ ವಿದ್ಯಾರ್ಥಿ ಬೋಧಿಸಿದರು. ಕುಮಾರಿ ನಾಗಲಕ್ಷಿ, ಯಲ್ಲಪ್ಪ, ಸೌಮ್ಯ, ಸುಷ್ಮಾ, ರೋಹಿತ್, ರಾಜ, ಏನು ಅರ್ಪಿತಾ, ಪ್ರಾರ್ಥನಾ ಗೀತೆಯನ್ನು ಹಾಡಿದರು. ಡಾ.ಶರಣಬಸವ ಇವರು ಕಾರ್ಯಕ್ರಮವನ್ನು ವಂದಿಸಿ, ನಿರೂಪಿಸಿದರು.



























