ಹರ್ ಗರ್ ತಿರಂಗ ಯಾತ್ರೆಗೆ ಚಾಲನೆ

ಸಂಜೆವಾಣಿ ನ್ಯೂಸ್
ಮೈಸೂರು: ಆ.13:-
ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಾಂತರ ಭಾಗಗಳಾದ ಜಯಪುರ ದಾರಿಪುರ ಉದ್ಬೂರು ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಬಿಜೆಪಿಯ ಚಾಮುಂಡೇಶ್ವರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಹೇಮಂತ್ ಅಪ್ಪಾಜಿಗೌಡ ಅವರ ನೇತೃತ್ವದಲ್ಲಿ ಹರ್ ತಿರಂಗಯಾತ್ರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ದೇಶದ ಪ್ರಧಾನ ಮಂತ್ರಿ ಮೋದಿಜಿ ಅವರ ಆದೇಶದ ಮೇರೆಗೆ ರಾಷ್ಟ್ರಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅದ್ದೂರಿಯಾಗಿ ನಮ್ಮ ರಾಷ್ಟ್ರದ ಪ್ರತಿಯೊಬ್ಬರ ಮನೆಯ ಮೇಲು ತಿರಂಗಧ್ವಜವನ್ನು ಆರಿಸಬೇಕೆಂದು ಸೂಚನೆ ನೀಡಿರುವ ಮೋದಿಜಿಯವರ ಆದೇಶದಂತೆ ಭಾರತೀಯ ಜನತಾ ಪಾರ್ಟಿ ಹಾಗೂ ಸಾರ್ವಜನಿಕರೊಡಗೂಡಿ ಪ್ರತಿ ಕ್ಷೇತ್ರದಲ್ಲೂ ಹರ್ ಗರ್ ತಿರಂಗ ಯಾತ್ರೆ ಪ್ರಾರಂಭ ಮಾಡಿದ್ದು ಇಂದು ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಾಂತರ ಭಾಗವಾದ ಜಯಪುರ ದಾರಿಪುರ ಉದ್ಬೂರು ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ಸಾರ್ವಜನಿಕರು ಒಟ್ಟಾಗಿ ಸೇರಿ ತಿರಂಗ ಯಾತ್ರೆ ಮಾಡುತ್ತಿದ್ದೇವೆ. ಆ ಮೂಲಕ ಸ್ವತಂತ್ರ ಪೂರ್ವದಲ್ಲಿ ಹೋರಾಟ ನಡೆಸಿದಂತಹ ಪ್ರತಿಯೊಬ್ಬ ರಾಷ್ಟ್ರ ನಾಯಕರನ್ನು ನೆನಪಿಸಿಕೊಳ್ಳುವ ಕೆಲಸವಾಗುತಿದೆ ಅಷ್ಟೇ ಅಲ್ಲದೆ ನಮ್ಮ ಕಾರ್ಯಕರ್ತರು ಪ್ರತಿಯೊಬ್ಬ ರಾಷ್ಟ್ರ ನಾಯಕರ ಮೂರ್ತಿಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದು ಇಂದು ಪ್ರಾರಂಭವಾದ ಈ ಯಾತ್ರೆ, ಆಗಸ್ಟ್ 15ರಂದು ಸಂಜೆ 6 ಗಂಟೆಗೆ ಮುಗಿಯಲಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಇದೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿಯ ಚಾಮುಂಡೇಶ್ವರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಹೇಮಂತ್ ಅಪ್ಪಾಜಿಗೌಡ ಅವರು ಪ್ರಧಾನಿ ನರೇಂದ್ರ ಮೋದಿಜಿಯವರ ಆದೇಶದ ಮೇರೆಗೆ ಪ್ರತಿಯೊಬ್ಬ ಸಾರ್ವಜನಿಕರು ವ್ಯಕ್ತಿ ಪ್ರೇಮ ಮಾಡುವುದಕ್ಕಿಂತ ದೇಶಪ್ರೇಮ ಮಾಡುವುದು ಅಷ್ಟೇ ಅಲ್ಲದೆ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯ ದಿನಾಚರಣೆಯನ್ನು ತಮ್ಮ ಮನೆಯ ಮೇಲು ತಿರಂಗ ಧ್ವಜವನ್ನು ಆರಿಸುವ ಮೂಲಕ ಸ್ವತಂತ್ರ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಬೇಕೆಂದು ಮನವಿ ಮಾಡಿದರು.


ಈ ವೇಳೆ ತಿರಂಗ ಯಾತ್ರೆಯ ಬೈಕ್ ರ್ಯಾಲಿಯಲ್ಲಿ ಪೈ ರವಿ, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹೇಮಂತ್ ಅಪ್ಪಾಜಿಗೌಡ, ರೈತ ಉಪಾಧ್ಯಕ್ಷ ಶಿವಕುಮಾರ್, ಶ್ರೀನಿವಾಸ, ಆಡಿ ಮನುಶಿವರಾಮ್, ಜಯಪುರ ಗ್ರಾಮದ ಮುಖಂಡರು ಗಳು, ಯುವಕರು ಭಾಗವಹಿಸಿ ಯಶಸ್ವಿಗೊಳಿಸಿದರು.