
ಸಂಜೆವಾಣಿ ವಾರ್ತೆ
ಬಳ್ಳಾರಿ, ನ.15: ಸರ್ಕಾರಿ ಹಿರಿಯ ಪ್ರಾಥಮಿಕ ಹರಗಿನ ಡೋಣಿ ಶಾಲೆಯಲ್ಲಿ. ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಷಕರ ಮತ್ತು ಶಿಕ್ಷಕರ ಮಹಾಸಭೆ ನಡೆಯಿತು. ಸಭೆಯು ಮಕ್ಕಳಿಂದ ಪ್ರಥಮವಾಗಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು.ಸರ್ವರನ್ನು ಸ್ವಾಗತಿಸಲಾಯಿತು. ಗೌರವಯುತವಾಗಿ ಸಂವಿಧಾನದ ಪೀಠಿಕೆಯನ್ನು ಹೇಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೋಳದ ರಾಶಿ ತಿಮ್ಮಪ್ಪ ರಾಜ್ಯದ್ಯಕ್ಷರು ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟ ಇವರು ಮಕ್ಕಳಿಗೆ ಮಕ್ಕಳ ದಿನಾಚರಣೆ ಶುಭಾಶಯಗಳು ತಿಳಿಸುತ್ತಾ ಸಿಹಿ ಹಂಚಿದರು. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದಂತಹ ವ್ಯಕ್ತಿಗಳಾದ ಅಬ್ದುಲ್ ಕಲಾಂ, ಡಾಕ್ಟರ್ ಅಂಬೇಡ್ಕರ್ , ವಿವರಗಳನ್ನು ನಿದರ್ಶನ ನೀಡುತ್ತಾ, ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಪೋಷಕರಾದ ನಿಮ್ಮ ಪಾತ್ರ ಮಹತ್ತರವಾದದ್ದು. ಇದೇ ಶಾಲೆ ಇದೇ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿದಂತಹ, ಅನೇಕ ವ್ಯಕ್ತಿಗಳನ್ನು ಗುರುತಿಸುತ್ತಾ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿ ನಿಮ್ಮ ಮಕ್ಕಳು ಶಾಲೆಗೆ, ಊರಿಗೆ , ನಾಡಿಗೆ, ಹೆಸರಾಗುವಂತಹ ಅದ್ಭುತ ವ್ಯಕ್ತಿಗಳಾಗಲಿ, ಇಂತಹ ಮಹತ್ತರವಾದ ಕಾರ್ಯ ನಡೆಯಬೇಕಾದರೆ ಪೋಷಕರ ಪಾತ್ರ ಹತ್ತರವಾಗಿದೆ ಎಂದು ಪೋಷಕರಿಗೆ ಅರ್ಥೈಸಿದರು. ಎಸ್ ಟಿ ಎಂ ಸಿ ಅಧ್ಯಕ್ಷರಾದಂತಹ ದೊಡ್ಡನಗೌಡರು ಶಾಲಾ ಮಕ್ಕಳಿಗೆ ಶುಭ ಕೋರುತ್ತಾ ಮಕ್ಕಳ ಬಗ್ಗೆ ಬಹಳಷ್ಟು ಕಾಳಜಿ ವಹಿಸಿ, ಮಕ್ಕಳ ಪ್ರಗತಿ ಸಾಧಿಸಬೇಕಾದರೆ ಪ್ರತಿದಿನ ಶಾಲೆಗೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಇಂದು ನೀವೆಲ್ಲ ಸೇರಿರುವುದು ತುಂಬಾ ಸಂತೋಷದ ವಿಷಯವೆಂದು ಪೋಷಕರನ್ನು ಕುರಿತು ಮಾತನಾಡುತ್ತಾ ಕಾರ್ಯಕ್ರಮದ ಯಶಸ್ಸಿಗೆ ನಿದರ್ಶನವಾಗಿದ್ದರು. ಮುಖ್ಯ ಗುರುಗಳಾದ ಜೀವ ಮೇಡಂ , ಪ್ರತಿ ಶಿಕ್ಷಕರಿಗೂ ಇಲಾಖೆ ನೀಡಿದಂತಹ ಕರ್ತವ್ಯಗಳನ್ನು ನಿರ್ವಹಿಸಲು ಮಾರ್ಗದರ್ಶನ ಮಾಡಿ ಪೋಷಕರು ಮಕ್ಕಳು ಶಾಲೆಗೆ ಗೈರು ಆಗದಂತೆ ಪ್ರತಿದಿನ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಹೇಳುತ್ತಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರು ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ವನಜಾಕ್ಷಮ್ಮ, ಮಂಜುಳ ರಾಣಿ, ಕ್ಷಮಿಸು, ಗ್ರೇಸಿ, ಮಾಧುರಿ, ಮಲ್ಲಿಕಾರ್ಜುನ್, ಲೋಕೇಶ್, ಅತಿಥಿ ಶಿಕ್ಷಕರಾದ ಅಶೋಕ್, ಆರೋಗ್ಯ ಇಲಾಖೆಯವರು, ಅಂಗನವಾಡಿ ಶಿಕ್ಷಕಿರಾದ ಭಾರತಿ, ಭಾಗ್ಯಮ್ಮ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರು, ಶಿಕ್ಷಣ ಪ್ರೇಮಿಗಳು, ಊರಿನ ಹಿರಿಯರು, ಪೋಷಕರು ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ ನವೀನ ಮತ್ತು ನಂದೀಶ ವಿದ್ಯಾರ್ಥಿಗಳನ್ನು, ಗೌರವಿಸಲಾಯಿತು.

























