
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.09: ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ. ತಾಲೂಕಿನ ಹರಗಿನಡೋಣಿ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಕೆಎಂಇಆರ್ ಸಿ ನಿಧಿಯಿಂದ ಕೆರೆಯನ್ನು ನಿರ್ಮಿಸುವಂತೆ ಒತ್ತಾಯಿಸಿ ಹರಗಿನ ದೋಣಿ ಜನತೆ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಖಾಲಿ ಕೊಡಗಳನ್ನು ಹಿಡಿದು ಷೋಷಣೆ ಕೂಗಿದರು.
ಅಕ್ರಮ ಗಣಿಗಾರಿಕೆಯಿಂದ ಗಣಿಭಾದಿತ ಪ್ರದೇಶದಲ್ಲಿ ವಿದ್ವಂಸಗೊಂಡಿದ್ದ ಜನರ ಬದುಕು ಮತ್ತು ಪರಿಸರ ಪುನಶ್ಚೇತನಗೊಳಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ.
ಹರಗಿನದೋಣಿ ಜನತೆಗೆ ಕುಡಿಯುವ ನೀರಿಗಾಗಿ ಕೆರೆ ನಿರ್ಮಾಣ ಕೂಡಲೇ ಮಾಡಬೇಕು. ವಸತಿ ಇಲ್ಲದವರಿಗೆ ನಿವೇಶನ ಕೊಟ್ಟು ಮನೆ ಕಟ್ಟಿಸಿ ಕೊಡಬೇಕು. ಗ್ರಾಮದಲ್ಲಿ ಸರ್ಕಾರಿ ಶಾಲೆಯ ಉನ್ನತೀಕರಣ ಮಾಡಿ ಸುಸಜ್ಜಿತ ಶಿಕ್ಷಣ ವ್ಯವಸ್ಥೆ ಮಾಡಬೇಕು. ಗ್ರಾಮದ ನೈರ್ಮಲ್ಯಕ್ಕಾಗಿ ಒಳಚರಂಡಿ, ಸುಜ್ಜಿತ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ಮಹಿಳೆಯರಿಗೆ ವಿವಿಧ ಕರಕೌಶಲ್ಯ ತರಬೇತಿಗಳು ನೀಡಿ, ಅವರ ಜೀವನ ಉತ್ತಮಗೊಳಿಸುವ ಉದ್ಯೋಗ ನೀಡಬೇಕು. ಗಣಿಗಾರಿಕೆಯಿಂದ ಹಾಳಾಗಿ ಹೋದ ಪರಿಸರ ಪುನಶ್ಚೇತನಗೊಳಿಸಲು, ಅರಣ್ಯ ಬೆಳೆಸುವ ಯೋಜನೆ ತಯಾರಿಸಿ ಗಣಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಒದಗಿಸಬೇಕು ಎಂದು ಒತ್ತಾಯಿಸಲಾಯ್ತು.
ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾದ ಡಿ. ನಾಗಲಕ್ಷ್ಮಿ, ಸಮಿತಿಯ ಹರಗಿನಡೋಣಿ ಮುಖಂಡರಾದ ಸೋಮಶೇಖರ್ ಗೌಡ, ಚಂದ್ರು, ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಎ. ದೇವದಾಸ್, ಊರಿನ ಮುಖಂಡರಾದ ಬುಗ್ಗೇಶ್, ಶಿವರಾಮರೆಡ್ಡಿ, ಹೆಚ್ ರಾಜನ ಗೌಡ್ರು, ಬಸವನ ಗೌಡ, ಬಿ. ಹೆಚ್ ನೀಲಮ್ಮ, ಕೆ. ಎಂ. ವೀರಭದ್ರಯ್ಶ ಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.























