ಹಬೋಹಳ್ಳಿ :ರಾಜ್ಯೋತ್ಸವ ಅಂಗವಾಗಿ ಜಿಲ್ಲಾ  ಕವಿಗೋಷ್ಠಿ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ನ.07
ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನ ದಲ್ಲಿ ಇತ್ತೀಚಿಗೆ ಬರಹಗಾರರ ಬಳಗದ ವತಿಯಿಂದ  ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು  ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಬರಹಗಾರ ಬಳಗದ ತಾಲೂಕ ಅಧ್ಯಕ್ಷ ಸೋಮನಗೌಡ ಮಾತನಾಡಿ ಬರಹಗಾರರ ಬಳಗದ ಕಾರ್ಯ ವಿಶೇಷತೆಯನ್ನು ತಿಳಿಸಿದರು
 ಕಾರ್ಯಕ್ರಮದ ಉದ್ಘಾಟನೆಯನ್ನು  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷ ಗೂಳಪ್ಪ ಹುಲಿಮನಿ ನೆರವೇರಿಸಿ ಮಾತನಾಡಿ ಕನ್ನಡ ಸಾಹಿತ್ಯ, ಭಾಷೆ, ನಾಡು, ನುಡಿಯ, ಬಗ್ಗೆ ಹೆಮ್ಮೆ ಇರಬೇಕು ಎಂದರು .
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಬರಹಗಾರ ಬಳಗದ ರಾಜ್ಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಮಧು ನಾಯ್ಕ ಲಂಬಾಣಿ ಮಾತನಾಡಿ  ಕರ್ನಾಟಕ ರಾಜ್ಯ ಬರಹಗಾರರ ಬಳಗದ ನೇತೃತ್ವದಲ್ಲಿ ಕರ್ನಾಟಕದಾದ್ಯಂತವಾಗಿ ಇಂದು ಏಕಕಾಲಕ್ಕೆ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಕನ್ನಡ ಸಾಹಿತ್ಯ ಭಾಷೆ ಪರಂಪರೆ ನಾಡು ನುಡಿ ಅಭಿಮಾನವನ್ನು ಬರಹಗಾರರ ಬಳಗವು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ .ಹಾಗೂ ಸಾಹಿತ್ಯವನ್ನು ಕಟ್ಟುವುದು ಹೇಗೆ? ಸಾಹಿತ್ಯವನ್ನು ವಿಮರ್ಶೆ ಮಾಡುವುದು ಹೇಗೆಂದು ಮತ್ತು ಸಾಹಿತಿಗಳು ಬೇರೆ ಬೇರೆ ಕವಿಗಳು ಬರಹಗಾರರು ಬರೆದಂತಹ ಹೆಚ್ಚೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಹೆಚ್ಚಿನ ವಿಷಯಗಳನ್ನು ಸಂಗ್ರಹಿಸಿಕೊಳ್ಳಬೇಕು ಇದು ಸೃಜನಶೀಲ ಸಾಹಿತ್ಯ ಬರವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು
  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ     ಉಪನ್ಯಾಸಕ ಅಕ್ಕಿ ಬಸವೇಶ ಮಾತನಾಡಿ  ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಕವಿಗಳ ಪಾತ್ರ ಬಹಳ ದೊಡ್ಡದಾಗಿದೆ ಹಾಗೂ ಪ್ರಸ್ತುತ ಸನ್ನಿವೇಶದಲ್ಲಿ ಕವಿಗಳು ಸಮಾಜ ಎಚ್ಚರದ ಕೆಲಸ ಮಾಡುವಲ್ಲಿ ಸಾಹಿತ್ಯ ಸಾಹಿತಿಗಳ ಪಾತ್ರ ಬಹುದೊಡ್ಡದಾಗಿದೆ ಎಂದು ತಿಳಿಸಿದರು,
ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಕೆ ಎಸ್ ನಾಯ್ಕ ತಾಲೂಕು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಪದಾಧಿಕಾರಿಗಳ ಕೆಲಸ ಕಾರ್ಯಗಳು ಹಾಗೂ ಸಾಹಿತ್ಯದ ಶಕ್ತಿಯ ಕುರಿತು ಮಾತನಾಡಿದರು
ರಾಜಮಟ್ಟದ  ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರೆಡ್ಡಿ ನಾಯ್ಕ ಮಾತನಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎ ಆರ್ ಪಂಪಣ್ಣ ವಹಿಸಿದ್ದರು.
ಈ ಸಂದರ್ಭದಲ್ಲಿ  ಸಾಹಿತಿಗಳಾದ ಐ ಜಯಮ್ಮ ಮತ್ತಿಹಳ್ಳಿ, ಜಿಲ್ಲಾ ಗೌರವಾಧ್ಯಕ್ಷರು ಮಂಜುನಾಥ ಗಂಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಬಸವರಾಜ್ ತಾಲೂಕು ಅಧ್ಯಕ್ಷರು ಹರಪನಹಳ್ಳಿ ವಿಜಯಕುಮಾರ್ ತಾಲೂಕು ಅಧ್ಯಕ್ಷರು ಕೂಡ್ಲಿಗಿ, ಬಿ ಬಿ ಜಿ ಗೌತಮ್ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷರು, ಗಣೇಶ್ ರಾವ್ ಹವಾಲ್ದಾರ್ ಉಪ್ಪಾರ ಬಸಪ್ಪ, ಮಲ್ಲೇಶಪ್ಪ, ,ಟಿ ಮಾರುತಿ ತಾಲೂಕು ಪ್ರಧಾನ ಕಾರ್ಯದರ್ಶಿಗಳು ಸೀತಾ ಹವಾಲ್ದಾರ್ , ಎಲ್ ಸಿ ನಾಯ್ಕ, ಸೋಮನಾಥ ಕಲಾವಿದರು, ಎಲ್ ಸೇವ್ಯಾನಾಯ್ಕ ನಿವೃತ್ತ ಶಿಕ್ಷಕರು ಬಿ ಕೊಟ್ರಪ್ಪ ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ. ಮತ್ತು ಇತರರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶಕುಂತಲ ಹೂಗಾರ್ ಸ್ವಾಗತ ಸಿವೈ ಮೋರ್ನಾಳ್, ವಂದನಾರ್ಪಣೆ ಮಂಜುನಾಥ ಮಾಡಲಗೇರಿ  ನಾಗರಾಜ್ ಗಂಟಿ ನಿರೂಪಿಸಿದರು.