
ಸಂಜೆವಾಣಿ ವಾರ್ತ
ಹಗರಿಬೊಮ್ಮನಹಳ್ಳಿ. ಜು.03 ಪಟ್ಟಣದ ಸರ್ಕಾರಿ ಗಂಗಾವತಿ ವೆಂಕೋಬಣ್ಣ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ವೈದ್ಯಕೀಯ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ವೈದ್ಯರು ಎದುರಿಸುತ್ತಿರುವ ಇಂದಿನ ಪರಿಸ್ಥಿತಿಯ ಕುರಿತು ವಿವರಿಸಿ, ಸರ್ಕಾರಿ ಆಸ್ಪತ್ರೆಯನ್ನು ಇನ್ನಷ್ಟು ಉನ್ನತೀಕರಿಸುವ ಅಗತ್ಯವಿದೆ ಎಂದರು .
ಮಕ್ಕಳ ತಜ್ಞ ಡಾ. ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 750 ರಿಂದ 800 ಹೊರರೋಗಿಗಳಿಗೆ (ಔPಆ) ಚಿಕಿತ್ಸೆ ನೀಡಲಾಗುತ್ತಿದ್ದು, ಇದು ಜಿಲ್ಲೆಯಲ್ಲಿಯೇ ಅತ್ಯಧಿಕ ಸಂಖ್ಯೆಯಾಗಿದೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಡಾ. ಅಚ್ಯುತ್ ಅವರು ತಮ್ಮ ಹಿಂದಿನ ಸೇವಾ ಅನುಭವಗಳನ್ನು ಹಂಚಿಕೊಂಡು, ವೈದ್ಯಕೀಯ ವೃತ್ತಿಯ ಮಹತ್ವ ಹಾಗೂ ಸೇವಾ ಮನೋಭಾವದ ಕುರಿತು ಮಾತನಾಡಿದರು. ಈ ಕಾರ್ಯಕ್ರಮವನ್ನು ನಾಗಭೂಷಣ ಗದ್ದಿಕೇರಿ ಮತ್ತು ಅವರ ತಂಡದಿಂದ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದಲ್ಲಿ ಡಾ. ಶಿವಕುಮಾರ್ (ಅಒಔ), ಡಾ. ತಿಪ್ಪೇಸ್ವಾಮಿ, ಡಾ. ಅಚ್ಯುತ್, ಡಾ. ಸಿದ್ಧಾರ್ಥ್, ಡಾ. ರಾಜೇಶ್ ನಾಯಕ್, ಡಾ. ಮಾಲತೇಶ್, ಡಾ. ಶಿವಕುಮಾರ್, ಡಾ. ಲಕ್ಷ್ಮೀದೇವಿ, ಡಾ. ಭಾರತಿ ಹಾಗೂ ಡಾ. ಅಂಜುಮ್ ಮುನಿಸಾ ಸೇರಿದಂತೆ ಎಲ್ಲಾ ವೈದ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಸಿಬ್ಬಂದಿ ನರ್ಸ್ ಗೀತಾ ಪ್ರಾರ್ಥನೆ ನಿರೂಪಿಸಿದರು. ಶರತ್ ಹಿರೇಮಠ್ ಅವರು ಸ್ವಾಗತಿಸಿದರು.




























