
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಡಿ.18 ಪಟ್ಟಣದ ಚಿಂತ್ರಪಳ್ಳಿ ಬಳಿ ಇರುವ ಡಾಕ್ಟರ್ ಬಿಆರ್ ಅಂಬೇಡ್ಕರ್ ಬಾಲಕಿಯರ ಕಾಲೇಜ್ ವಿದ್ಯಾರ್ಥಿ ನಿಲಯಕ್ಕೆ ಬುಧವಾರ ವಿಜಯನಗರ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರ ಷಾ ದಿಢೀರ್ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಪೂರೈಕೆ ಆಗುವ ಆಹಾರ ಸಾಮಗ್ರಿಗಳು ಮತ್ತು ಸಂಗ್ರಹಿಸಿದ ಆಹಾರ ಪದಾರ್ಥಗಳ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದರು.
ಉಗ್ರಾಣದ ಕೊಠಡಿಗೆ ಭೇಟಿ ನೀಡಿ ದಾಖಲು ಪುಸ್ತಕ ಹಾಗೂ ದಾಸ್ತಾನು, ವಿದ್ಯಾರ್ಥಿಗಳ ಹಾಜರಾತಿ ಬಯೋಮೆಟ್ರಿಕ್ ಕುರಿತು ಪರಿಶೀಲನೆ ನಡೆಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ಅವರಿಂದ ಬಾಲಕಿಯರ ಹಾಜರಾತಿ ಮತ್ತು ಸಂಖ್ಯೆಯ ಬಗ್ಗೆ ಮಾಹಿತಿ ಪಡೆದರು.
ವಿದ್ಯಾರ್ಥಿನಿಯರನ್ನು ಸಂಪರ್ಕಿಸಿ ಅಗತ್ಯವಾದ ಸೌಲಭ್ಯಗಳ ಕುರಿತು ಬಾಲಕಿಯರಿಂದ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸಹಾಯಕ ಯೋಜನೆ ಅಧಿಕಾರಿ ಉಮೇಶ, ಸಿಇಒ ಆಪ್ತ ಸಹಾಯಕ ಸುಣ್ಣಗಾರ ಮಂಜುನಾಥ, ಹಾಸ್ಟೆಲ್ ವಾರ್ಡನ್ ಎ.ಗೀತಾ ಇದ್ದರು.























