
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.03 ಪಟ್ಟಣದ ರಾಮನಗರ ವ್ಯಾಪ್ತಿಯ ಕೂಡ್ಲಿಗಿ ಸರ್ಕಲ್ ನ್ನು ಶ್ರೀ ವಾಸವಿ ವೃತ್ತವಾಗಿ ನಾಮಕರಣ ಮಾಡುವಂತೆ ಆರ್ಯವೈಶ್ಯ ಸಮಾಜದ ಮುಖಂಡರು ಗುರುವಾರ ಶಾಸಕ ಕೆ. ನೇಮಿರಾಜ್ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಕೋರಗಲ್ ರಾಘವೇಂದ್ರ ಮಾತನಾಡಿ ಸಮಾಜದ ಮಹಾದಾನಿಗಳಾದ ನಮ್ಮ ಸಮಾಜದ ಹಿರಿಯರಾದ ಗಂಗಾವತಿ ವೆಂಕೋಬಣ್ಣನವರು ಪಟ್ಟಣದಲ್ಲಿ ಧರ್ಮ ಛತ್ರ, ತೇರು ಬೀದಿ, ಪದವಿಪೂರ್ವ ಕಾಲೇಜ್, ಡಿಗ್ರಿ ಕಾಲೇಜ್,ಸಾರ್ವಜನಿಕ ಆಸ್ಪತ್ರೆ, ನಿರ್ಮಾಣಕ್ಕೆ ಸ್ಥಳ ದಾನಿಗಳಾಗಿದ್ದಾರೆ. ಇದಲ್ಲದೆ ಮೂರು ತಾಲೂಕಿಗೆ ಶುದ್ಧ ಕುಡಿಯುವ ನೀರಿನ ಘಟಕ, ಗರಡಿಮನೆ, ಬಂಡಿಹಳ್ಳಿ ದೇವಸ್ಥಾನ, ರಥ ನಿರ್ಮಿಸಿ ಎಲ್ಲಾ ಸಮಾಜದವರಿಗೆ ಮಾದರಿಯಾಗಿದ್ದಾರೆ. ಆದ್ದರಿಂದ ಕೂಡ್ಲಿಗಿ ಸರ್ಕಲ್ ನ್ನು ಶ್ರೀ ವಾಸವಿ ವೃತ್ತ ಎಂದು ನಾಮಕರಣ ಮಾಡಲು ತಮ್ಮಲ್ಲಿ ಸಮಸ್ತ ಸಮಾಜದವರು ಕೇಳಿಕೊಳ್ಳುತ್ತೇವೆ. ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಪಂದಿಸಬೇಕು ಎಂದರು. ಶಾಸಕ ಕೆ. ನೇಮಿರಾಜ್ ನಾಯ್ಕ ಮಾತನಾಡಿ ವಾಸವಿ ವೃತ್ತ ನಾಮಕರಣಕ್ಕೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ(ರಿ), ದ ರಾಜ್ಯಾಧ್ಯಕ್ಷರಾದ ಭರತ್ ಗಂಗಾವತಿ,
ಗಂಗಾವತಿ ಮಂಜುನಾಥ ಶ್ರೇಷ್ಠಿ, ಗಂಗಾವತಿ ಸುದರ್ಶನ ಶ್ರೇಷ್ಠಿ, ಗಂಗಾವತಿ ಲಕ್ಷ್ಮೀಪತಿ (ನಿಕಟಪೂರ್ವ ಅಧ್ಯಕ್ಷರು), ಬೆಲ್ಲಂಕೊಂಡಿ ರಮೇಶ್,ಗೋಪಾಲ, ವೆಂಕಟಾಚಲಪತಿ ವೇಣುಗೋಪಾಲ, ಕುಮಾರ್ ಇಂಜಿನಿಯರ್, ಪ್ರಭಾಕರ್ ಶ್ರೇಷ್ಠಿ, ಬೇಳೂರು ಮಾರುತಿ ಶ್ರೇಷ್ಠಿ, ಕುಪ್ಪಾ ಶಿವಕುಮಾರ್, ಕುಪ್ಪಾ ಲಕ್ಷ್ಮೀಪತಿ (ಪುಟ್ಟು), ಬಾಲಾಜಿ, ಪ್ರವೀಣ್, ಪ್ರಕಾಶ್, ಬಸಾಪುರ ರಾಘವೇಂದ್ರ, ಹನುಮಂತ ಶ್ರೇಷ್ಠಿ, ನಾನ್ಯಾಪೂರ ಕೃಷ್ಣಮೂರ್ತಿ, ರಾಜೇಂದ್ರ
ಮತ್ತು
ಲಕ್ಷ್ಮೀ ಹೆಚ್, ಸವಿತಾ ರಮೇಶ್, ರೋಜಾ ಗಂಗಾವತಿ, ವಿನುತ, ರಮ್ಯಾ, ಪಾರ್ವತಕ್ಕ, ಭಾರತಿ, ಜಯಶ್ರೀ, ಶಿಲ್ಪಾ ನಂದಿಬಂಡಿ, ಮಾಧವಿ ಚಿದ್ರಿ, ಇತರರಿದ್ದರು.































