
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಮೇ.22 ಪಟ್ಟಣದ ಹೊರವಲಯದ ಅಗ್ನಿಶಾಮಕ ಠಾಣೆಯ ಸಮೀಪ ಗುರುವಾರ ರಾತ್ರಿ ಸುಮಾರು 9 ಗಂಟೆಯ ಸುಮಾರಿನಲ್ಲಿ ಮಹಿಳೆಯ ಅನುಮಾನಸ್ಪದ ವಾಗಿ ಸಾವು ಸಂಭವಿಸಿದ ಘಟನೆ ನಡೆದಿದೆ
ವಿಷಯ ತಿಳಿದು ಘಟನೆ ಸ್ಥಳಕ್ಕೆ ವಿಜಯನಗರ ಜಿಲ್ಲಾ ಎಸ್ಪಿ ಜಾಹ್ನವಿ ,ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಸಿಪಿಐ ವಿಕಾಸ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಮಹಿಳೆ ಪಟ್ಟಣ ರಾಮ್ ರಹೀಮ್ ನಗರದ ನಿವಾಸಿ ಪ್ರಿಯಾಂಕ (27) ಕಳೆದ ಕೆಲ ತಿಂಗಳಿಂದ ಇಲ್ಲಿನ ಮಿಯಾ ಫ್ಯಾಷನ್ ಎಂಬ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಗುರುವಾರ ರಾತ್ರಿ 8.30 ನಿಮಿಷದ ವರೆಗೂ ಅಂಗಡಿಯಲ್ಲಿ ಕೆಲಸ ಮುಗಿಸಿಕೊಂಡು, ಆನೇಕಲ್ ತಾಂಡದ ಇಬ್ಬರು ಯುವಕರೊಂದಿಗೆ ಮಹಿಳೆ ತೆರಳಿದ್ದಾಗ ಸುಮಾರು 9 ಗಂಟೆಗೆ ಹೊರವಲಯದಲ್ಲಿ ಘಟನೆ ಸಂಭವಿಸಿದೆ,
ಯುವತಿಯು ಕಳೆದ 5 ವರ್ಷದ ಹಿಂದೆ ವ್ಯಾಸಪುರ ತಾಂಡದ ಯುವಕನೊಂದಿಗೆ ವಿವಾಹವಾಗಿದ್ದು,ಕೆಲವು ದಿನಗಳ ಹಿಂದೆ ವಿಚ್ಚೆದನ ವಾಗಿದೆ. ಪಟ್ಟಣದ ರಾಮ್ ರಹೀಮ್ ನಗರದಲ್ಲಿ ತನ್ನ 4 ವರ್ಷದ ಮಗನೊಂದಿಗೆ ಜೀವನ ಸಾಗಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ಘಟನೆಗೆ ಸಂಭಂಧಿಸಿದಂತೆ ಡಿವೈಸ್ಪಿ ಮಲ್ಲೇಶ್ ಅವರು ಪ್ರತಿಕ್ರಿಯೆ ನೀಡಿ ಘಟನಾ ಸ್ಥಳಕ್ಕೆ ರಾತ್ರಿ ಎಸ್ಪಿ ಅವರು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದೇವೆ.
ಘಟನೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆ : ಘಟನೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿ ಈಗಾಗಲೇ ಇಬ್ಬರು ಯುವಕರಾದ ಸುನಿಲ್ ನಾಯ್ಕ್, ಕೃಷ್ಣ ನಾಯ್ಕ್ ನ್ನು ವಶಕ್ಕೆ ಪಡೆಯಲಾಗಿದೆ ಎಂಬ ಬಲ್ಲ ಮೂಲಗಳಿಂದ ತಿಳಿದುಬಂದಿದೆ, ಮಹಿಳೆಯ ಉಟ್ಟ ಬಟ್ಟೆಗಳು ಹರಿದಿದ್ದು, ತಲೆಯಿಂದ ಹೆಚ್ಚು ರಕ್ತಸ್ರಾವ ವಾಗಿದ್ದು, ಸ್ಪಷ್ಟ ತನಿಖೆಯಿಂದ ಘಟನೆಯ ರಹಸ್ಯ ತಿಳಿಯಬೇಕಿದೆ. ಪೊಲೀಸ್ ಠಾಣೆಯಲ್ಲಿ ಯುವತಿ ಸಾವು ಕೊಲೆಯಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿ ಈ ಬಗ್ಗೆ ಪೋಷಕರು ದೂರು ದಾಖಲು ಮಾಡಿದ್ದಾರೆ.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ
ಭಯೋತ್ಪಾದನಾ ವಿರೋಧಿ ದಿನಾಚರಣೆ
ಹೊಸಪೇಟೆ.ಮೇ.22 ಸ್ಥಳೀಯ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಗುರುವಾರ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತಮಾಡಿ, ಅಹಿಂಸೆ ಹಾಗೂ ಸಹನೆಗೆ ಹೆಸರಾದ ಭವ್ಯ ಭಾರತದ ಸಂವಿಧಾನದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವುಗಳು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮಲ್ಲ ಶಕ್ತಿ ಸಾಮರ್ಥ್ಯದಿಂದ ಎದುರಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಙೆ ಮಾಡಬೇಕಾಗಿದೆ. ನಮ್ಮಲ್ಲಿ ಶಾಂತಿ ಸಾಮಾಜಿಕ ಸೌಹಾರ್ದತೆ, ಹಾಗೂ ಪರಸ್ಪರ ಅರಿವನ್ನು ಸಾಧಿಸಲು, ಉತ್ತೇಜಿಸಲು ಮತ್ತು ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆ ಒಡ್ಡುತ್ತಿರುವ ವಿಚ್ಛೇದ್ರಿಕಾರಿ ಶಕ್ತಿಗಳ ವಿರುದ್ಧ ಹೋರಾಡುವ ಪಣ ತೊಡಬೇಕಾಗಿದೆ ಎಂದರು.
ನೂತನ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪ್ರತಿಜ್ಙಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.






















