ಹನೂರಿನಲ್ಲಿ ಸ್ವಾತಂತ್ರೋತ್ಸವದ ಸಂಭ್ರಮಾಚರಣೆ

ಸಂಜೆವಾಣಿ ವಾರ್ತೆ
ಹನೂರು ಆ 16 :-
ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆ ಶಾಸಕ ಎಂ.ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಸಕ ಎಂ. ಆರ್.ಮಂಜುನಾಥ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಪವಾಡ ಪುರಷ ಮಲೆ ಮಹದೇಶ್ವರ ನೆಲದಲ್ಲಿ ಸ್ವಾತಂತ್ರ್ಯದಿನಾಚರಣೆ ಬಹಳ ಅದ್ದೂರಿ ಆಚರಣೆಗೆ ಸಾಕ್ಷಿಯಾಗಿದ್ದು ಬಹಳ ಸಂತೋಷ ವಾಗಿದೆ. ನಮ್ಮ ದೇಶಕ್ಕೆ 79ನೇ ವರ್ಷದ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರು ನೆನಪು ಮಾಡಿಕೊಳ್ಳುವ ದಿನವಾಗಿದೆ, ಅವರ ತ್ಯಾಗ ಬಲಿದಾನ ದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಭಾರತೀಯ 79ನೇ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು,.
ಹೋರಾಟವನ್ನೇ ತಮ್ಮ ಬದುಕನಲ್ಲಿ ಮುಡಿಪಾಗಿಟ್ಟು ದೇಶದ ಸ್ವಾತಂತ್ರ್ತಕ್ಕಾಗಿ ಬಲಿದಾನ ಮಾಡಿದ ಮಹನೀಯರನ್ನು ಇಂದಿನ ಯುವ ಜನತೆಯ ದೊಡ್ಡ ದೇಶವಾಗಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ ಯುವಕರು ಮಹಾನ್ ನಾಯಕರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಳೆದ ಬಾರಿ ಹನೂರು ತಾಲ್ಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಅತೀ ಕಡಿಮೆ ಫಲಿತಾಂಶ ಬಂದಿದೆ. ಆಗಾಗಿ ಸಂಬಂಧ ಪಟ್ಟ ಶಾಲಾ ಮುಖ್ಯ ಶಿಕ್ಷಕರಿಗೆ ಸಭೆ ಕರೆದು ಮುಂದಿನ ದಿನಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಬೇಕು. ಸೂಚನೆ ನೀಡಲಾಗಿದೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಿದೆ, ಹನೂರು ಆಸ್ಪತ್ರೆಯನ್ನು ಮೇಲ್ದಾರ್ಜೆಗೆ ಏರಿಸುವ ಮೂಲಕ ಅನುಕೂಲವಾಗಲಿದೆ. ಹಾಗೆಯೇ ಪಿ.ಜಿ ಪಾಳ್ಳ ಕೇಂದ್ರ ಒಡೆಯರ್ ಪಾಳ್ಯ ಸೇರಿದಂತೆ ಅರೋಗ್ಯ ಕೇಂದ್ರ ವಿಷಯದಲ್ಲಿ ಯಾವುದೆ ರಾಜಿ ಇಲ್ಲ. ಕ್ರೀಡಾಂಗಣ ಉನ್ನತ ಪಡಿಸಲು 6 ಕೋಟಿ ರೂ ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಚೈತ್ರಾ, ಬಿ.ಇ.ಓ ಗುರುಲಿಂಗಯ್ಯ, ಇ.ಒ ಉಮೇಶ್, ಸರ್ಕಲ್ ಇನ್ಸ್ಪೆಕ್ಟರ್ ಆನಂದಮೂರ್ತಿ , ಪಟ್ಟಣ ಪಂ. ಅಧ್ಯಕ್ಷೆ ಮಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್ ಕುಮಾರ್, ಸದಸ್ಯರಾದ ಮಹೇಶ್ ನಾಯಕ, ಲತಾ ಮಣಿ, ಮಹೇಶ್, ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಚಪ್ಪ, ಮಂಜೇಶ್ ಗೌಡ, ನಟರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.