Home ಜಿಲ್ಲೆ ಹನುಮಾನ್ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ದಸರಾ ಸಂಭ್ರಮ

ಹನುಮಾನ್ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ದಸರಾ ಸಂಭ್ರಮ

oplus_2097154

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಅ.17: ಇಲ್ಲಿನ ಹನುಮಾನ್ ನಗರದ 8 ನೇ ಕ್ರಾಸ್ ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಾಗು ದಸರಾ ಹಬ್ಬದ ಸಂಭ್ರಮ ನಡೆಯುತ್ತಿದೆ.

ಶ್ರೀ ಬನ್ನಿ ಮಹಾಂಕಾಳಮ್ಮ ದೇವಿ ಸೇವಾ ಟ್ರಸ್ಟ್ ನಿಂದ ದಸರಾ ಆಚರಣೆ ಹಮ್ಮಿಕೊಂಡಿದ್ದು ನಿತ್ಯ ಬೆಳಗಿನ ಜಾವ 4 ಗಂಟೆಯಿಂದಲೇ ದೇವಿ ವಿಗ್ರಹಕ್ಕೆ ವಿಶೇಷ ಪೂಜಾ ಹಾಗು ಅಲಂಕಾರ ಕಾರ್ಯಕ್ರಮಗಳ ನಡೆಯುತ್ತಿದ್ದು. ಬಂದ ಭಕ್ತರಿಗೆ ಪ್ರಸಾದ ವಿತರಣೆಯೂ ನಡೆದಿದೆ.

ದಸರಾ ಹಬ್ಬದ ಅಂಗವಾಗಿ ಅ.,20 ರಂದು ಬೆಳಿಗ್ಗೆ 11 ರಿಂದ ಜನತೆಗೆ ಅನ್ನ ದಾಸೋಹ ಸಹ ಹಮ್ಮಿಕೊಳ್ಳಲಾಗಿದೆಂದು ಟ್ರಸ್ಟ್ ನ ಕಿಶೋರ್ ಅವರು ತಿಳಿಸಿದ್ದಾರೆ.