ಹದಗೆಟ್ಟ ಖಲೀದಾ ಆರೋಗ್ಯ ಮೋದಿ ಕಳವಳ

ನವದೆಹಲಿ,ಡಿ.2:- ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷದ -ಬಿಎನ್‍ಪಿ ಅಧ್ಯಕ್ಷೆಯಾಗಿರುವ 80 ವರ್ಷದ ಖಲೀದಾ ಜಿಯಾ ಅವರ ಶ್ವಾಸಕೋಶ ಮತ್ತು ಹೃದಯದ ಮೇಲೆ ಪರಿಣಾಮ ಬೀರಿದ ಎದೆಯ ಸೋಂಕಿನ ನಂತರ ಢಾಕಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ
ಬಾಂಗ್ಲಾದೇಶಕ್ಕೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಭಾರತ ಸಿದ್ಧವಾಗಿದೆ. “ಹಲವು ವರ್ಷಗಳಿಂದ ಬಾಂಗ್ಲಾದೇಶದ ಸಾರ್ವಜನಿಕ ಜೀವನಕ್ಕೆ ಕೊಡುಗೆ ನೀಡಿರುವ ಬೇಗಂ ಖಲೀದಾ ಜಿಯಾ ಅವರ ಆರೋಗ್ಯದ ಹದಗೆಟ್ಟಿರುವುದು ತೀವ್ರ ಕಳವಳಕಾರಿ ಸಂಗತಿ ಎಂದು ಹೇಳಿದ್ದಾರೆ.


ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಖಲೀದಾ ಜಿಯಾ ಅವರ ಆರೋಗ್ಯ ಕ್ಷೀಣಿಸುತ್ತಿರುವು ಕಳವಳಕಾರಿ ಸಂಗತಿ, ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಬಿಎನ್‍ಪಿ ನಾಯಕರು ಪ್ರತಿಕ್ರಿಯಿಸಿ, ಶ್ವಾಸಕೋಶ ಮತ್ತು ಹೃದಯದ ಮೇಲೆ ಪರಿಣಾಮ ಬೀರಿದ ಎದೆಯ ಸೋಂಕಿನ ನಂತರ ಢಾಕಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ‘ಅತ್ಯಂತ ಗಂಭೀರ’ವಾಗಿದೆ ಮತ್ತು ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.


ಬಿಎನ್‍ಪಿ ಉಪಾಧ್ಯಕ್ಷ ವಕೀಲ ಅಹ್ಮದ್ ಆಜಂ ಖಾನ್ ಮಾತನಾಡಿ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಇಡೀ ರಾಷ್ಟ್ರದಿಂದ ಪ್ರಾರ್ಥನೆ ಕೋರುವುದನ್ನು ಬಿಟ್ಟು ಇನ್ನೇನೂ ಮಾಡಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ
ಬಿಎನ್‍ಪಿ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಮ್‍ಗಿರ್ ಕೂಡ ಜಿಯಾ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ದೃಢಪಡಿಸಿದ್ದು ಬಾಂಗ್ಲಾದೇಶದ ಪ್ರಜೆಗಳು ಅವರ ಚೇತರಿಕೆಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.


ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಜಿಯಾ ಅವರ ಆರೋಗ್ಯಕ್ಕಾಗಿ ವೈದ್ಯರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸ್ಥಳೀಯ ಮತ್ತು ವಿದೇಶಿ ತಜ್ಞರು ಅವರ ಚಿಕಿತ್ಸೆಯಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ
ಹತ್ಯೆಗೀಡಾದ ಬಾಂಗ್ಲಾದೇಶ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಪತ್ನಿ ಜಿಯಾ, ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆಗಳು, ಮಧುಮೇಹ, ಸಂಧಿವಾತ ಮತ್ತು ಕಣ್ಣಿನ ಸಂಬಂಧಿತ ಕಾಯಿಲೆಗಳು ಸೇರಿದಂತೆ ಹಲವಾರು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.


ವರ್ಷದ ಆರಂಭದಲ್ಲಿ, ಜಿಯಾ ನಾಲ್ಕು ತಿಂಗಳುಗಳ ಕಾಲ ಮುಂದುವರಿದ ವೈದ್ಯಕೀಯ ಚಿಕಿತ್ಸೆ ಪಡೆದು ಮೇ 6 ರಂದು ಲಂಡನ್‍ನಿಂದ ದೇಶಕ್ಕೆ ಮರಳಿದ್ದರು