
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.10: ನಗರದ ಗುರುಕುಲ ಇಂಟರ್ ನ್ಯಾಶನಲ್ ಸ್ಕೂಲ್ ನ ಹಾಸ್ಟಲ್ ನಲ್ಲಿ ಮಾ.7 ರಂದು ಓರ್ವ ವಿದ್ಯಾರ್ಥಿಯಿಂದ ನಡೆದ ಹಲ್ಲೆ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಯಚೂರು ಜಿಲ್ಲೆಯ 6 ನೇ ತರಗತಿಯ ವಿದ್ಯಾರ್ಥಿ ವಿಷ್ಣುನನ್ನು ಹೆಚ್ಚಿನ ಚಿಕಿತ್ಸೆಗೆಂದು ಹೈದ್ರಾಬಾದ್ ಗೆ ಕರೆದುಕೊಂಡು ಹೋಗಿದೆಯಂತೆ.
ಆತನ ಕರಳುಗೆ ತೀವ್ರ ಗಾಯವಾಗಿತ್ತು. ಬಳ್ಳಾರಿಯ ಬಿಎಂಆರ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪರಿಣಾಮಕಾರಿಯಾಗದ ವಿದ್ಯಾರ್ಥಿ ಪೋಷಕರು ಆತನನ್ನು ಹೈದ್ರಾಬಾದ್ಗೆ ಕರೆದುಕೊಂಡು ಹೋಗಿದ್ದಾರೆಂದು ತಿಳಿದುಬಂದಿದೆ.
ನಗರದಲ್ಲಿ ಪತ್ತೆ:
ಹಾಸ್ಟಲ್ ವಿದ್ಯಾರ್ಥಿ ಗಳು ಮತ್ತು ವಾರ್ಡ್ ನ್ ಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಓರ್ವ ವಿದ್ಯಾರ್ಥಿಗಳು ಸಾವಿಗೆ ಕಾರಣನಾದ ಆರೋಪಿ ವಿದ್ಯಾರ್ಥಿ ನಿನ್ನೆ ನಗರದ ಅಂಜಿನಪ್ಪ ಜಿನ್ನದ ಬಳಿ ಪೊಲೀಸರಿಗೆ ಸಿಕ್ಕಿದ್ದಾನೆಂದು ಎಸ್ಪಿಡಾ.ಸುಮನ್ ಡಿಪಿ ಹೇಳಿದ್ದಾರೆ.
ಘಟನೆಗೆ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ಪೊಲೀಸರು, ವೈದ್ಯರು ಮಕ್ಕಳ ಸಮಿತಿಯ ಅನುಮತಿ ಪಡೆದು ವಿಚಾರಣೆ ನಡೆಸಲಿದ್ದಾರಂತೆ. ಇಂದು ಸಂಜೆಗೆ ಏನೆಂಬುದನ್ನು ಆರೋಪಿ ವಿದ್ಯಾರ್ಥಿ ಹೇಳಬಹುದು.
ವಿಚಾರಣೆಗೆಂದು ನಾಲ್ಕು ದಿನ ತಮ್ಮ ವಶಕ್ಕೆ ನೀಡಲು ಪೊಲೀಸರು ಕೋರಿದ್ದಾರೆಂದು ತಿಳಿದು ಬಂದಿದೆ.




















