
ಸಂಜೆವಾಣಿ ವಾರ್ತೆ
ಹನೂರು.ನ.5:- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ರೈತ ಸಂಘಟನೆ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿ ಪ್ರತಿಭಟನೆ ಹತ್ತನೇ ದಿನಕ್ಕೆ ಕಾಲಿಟ್ಟಿದ್ದು ಮಂಗಳವಾರ ಸಂದನಪಾಳ್ಯ ಚರ್ಚ್ ಫಾದರ್ ಹಾಗೂ ಹೆಚ್ಚಿನ ಮಹಿಳೆಯರು ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ಹನೂರು ತಾಲೂಕಿನ ಕುರಟ್ಟಿ ಹೊಸೂರು ಪಂಚಾಯಿತಿ, ಶೆಟ್ಟಹಳ್ಳಿ ಪಂಚಾಯಿತಿ, ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಗಳ ಅಂತರ್ಜಲ ಅಭಿವೃದ್ಧಿಗಾಗಿ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘಟನೆ ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿ ಪ್ರತಿಭಟನೆ ಮುಂದುವರಿದು ಒಂಬತ್ತು ದಿನಗಳು ಕಳೆದು ಹತ್ತನೇ (ಇಂದು ಬುಧವಾರ) ದಿನಕ್ಕೆ ಕಾಲಿಟ್ಟಿದೆ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆ ವಡಕೆಹಳ್ಳ ಗ್ರಾಮದ ಚರ್ಚ್ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ರೈತ ಸಂಘಟನೆ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ದಿಕ್ಕಾರ ಘೋಷಣೆಗಳನ್ನು ಕೂಗಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ದಂಟ್ಟಳ್ಳಿ ಏತ ನೀರಾವರಿ ಯೋಜನೆ ಡಿ.ಪಿ.ಆರ್ ಮಾಡುವವರಿಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಆಗ್ರಹಿಸಿದ್ದಾರೆ.
ಮಂಗಳವಾರ ಆಹೋರಾತ್ರಿ ಧರಣಿ ಪ್ರತಿಭಟನೆಗೆ ಸಂದನಪಾಳ್ಯ ಚರ್ಚ್ ಫಾದರ್ ಆರೋಕ್ಯರಾಜ್ ಲೆನಾರ್ಡ್, ಕಾನ್ವೆಂಟ್ ಸಿಸ್ಟರ್ ರೀನಾ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿ ನೀರಾವರಿ ಯೋಜನೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟಿಸುವ ಮೂಲಕ ರೈತರ ಆಹಾರ ಧರಣಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಏತನೀರಾವರಿ ಹೋರಾಟ ಸಮಿತಿ ದಿನಾಂಕ: 27-10-2025 ರ ಸೋಮವಾರ ಬೆಳಗ್ಗೆ ಪ್ರಾರಂಭವಾದ ಅಹೋರಾತ್ರಿ ಧರಣಿ ಪ್ರತಿಭಟನ ಒಂಬತ್ತು ದಿನಗಳನ್ನು ಪೂರೈಸಿ ಹತ್ತನೇ ದಿನ ಬುಧವಾರಕ್ಕೆ ಕಾಲಿಟ್ಟಿದೆ. ದಂಟಳ್ಳಿ ನೀರಾವರಿ ಯೋಜನೆಗೆ ಡಿ.ಪಿ.ಆರ್. ಮಾಡಿಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ. ರೈತರ ಸಮಸ್ಯೆಗಳು ಬಗೆಹರಿಸಬೇಕು ಎಂಬ ರೈತರ ಪ್ರತಿಭಟನೆ ಮುಂದುವರಿಸಿದ್ದಾರೆ.
ಅಹೋರಾತ್ರಿ ಧರಣಿಯಲ್ಲಿ ಶೈಲೇಂದ್ರ, ಅರ್ಪುತರಾಜ್, ದಿವ್ಯಾನಂದ, ಜೋಸೆಫ್, ಸಿಂಗ್, ಲೂರ್ದುಸ್ವಾಮಿ, ಜೈದೀಪ್ ,ಪೀಟರ್, ಸಗಾಯಮೇರಿ, ಪುಟ್ಟಸ್ವಾಮಿ, ಮೇರಿ, ಕುಮಾರಿ, ಜೋಸ್ವಾ, ಕುಮಾರ್, ಸೇಠು, ಅಂಥೋನಿ, ಚಾರ್ಲೆಸ್, ಪೆರಿಯ ನಾಯಗಂ, ಸೇಸುರಾಜ್, ರಾಜಣ್ಣ, ಡೇವಿಡ್, ಪ್ರಕಾಶ್, ಮಹದೇವಸ್ವಾಮಿ, ತಮಿಳ್‍ಅರಸ್, ಆರೋಗ್ಯ ಸ್ವಾಮಿ, ಕಾನ್ವೆಂಟ್ ಸಿಸ್ಟರ್ ರೀನಾ, ಜೂಲಿ ಪಳನಿಕೆರೆಸ ಸದಾ ಮೇರಿಕುಮಾರಿ ಮಾದಮ್ಮಳ್ ಸೇರಿದಂತೆ ಅನೇಕ ರೈತರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
































