ಹಣವಿದ್ದರೂ ಯಾಕೆ ಖರ್ಚು ಮಾಡುತ್ತಿಲ್ಲಸಚಿವ ಭೈರತಿ ಸುರೇಶ್ ಅಧಿಕಾರಿಗಳಿಗೆ ತರಾಟೆ

Oplus_19005440


*ನನನ್ನು ಯಾಮಾರಿಸಲು ಬರಬೇಡಿ.
*ಮಾಹಿತಿ ಇಲ್ಲ ಎಂದರೆ ಹೇಗೆ
*ಏನು ಕೇಳಿದರೂ ಗೊತ್ತಿಲ್ಲ ಅಂತೀರಿ
* ಶ್ರೀಮಂತ ಮಹಾನಗರ ಒಅಲಿಕೆ ಇದೆ
* ವಾಣಿಜ್ಯ ಬಿಲ್ಡಿಂಗ್ ತೆರಿಗೆ ಬಿಡಬೇಡಿ.
* ನಗರದ ಅಭಿವೃದ್ಧಿಗೆ 200 ಕೋಟಿ ರೂ
* ಪಾಲಿಕೆ ಲಾಯರ್ ಗಳು ಸರಿ ಕೆಲಸ ಮಾಡಲ್ಲ ಯಾಕೆ
* ಸ್ವೀಪಿಂಗ್ ಮಿಷನ್ ಖರೀದಿ ಮಾಡಿ.
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.2: 
ಸರ್ಕಾರದಲ್ಲಿ ಹಣ ಇಲ್ಲ ಎಂದು ವಿರೋಧ ಪಕ್ಷದವರು ಬೊಬ್ಬೆ ಹೊಡೆಯುತ್ತಿದ್ದಾರೆ. ನೀವು ನೋಡಿದರೆ ಹಣ ಇದ್ದು ಕಾಮಗಾರಿ ಯಾಕೆ ತೆಗೆದುಕೊಂಡಿಲ್ಲ ಎಂದು ಪಾಲಿಕೆಯ ಅಧಿಕಾರಿಗಳನ್ನು
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ತರಾಟೆಗೆ ತೆಗೆದುಕೊಂಡರು.
ನಗರದ ಹೊಸ ಡಿಸಿ ಕಚೇರಿ ಸಭಾಂಗಣದಲ್ಲಿ  ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು,
1.24 ಕೋಟಿ ರೂಗೆ  ಕ್ರಿಯಾ ಯೋಜನೆ ತಯಾರಿಸಲು ಎರೆಡು ವರ್ಷ ಬೇಕಾ ಎಂದರು.
ಅಗಷ್ಟನಲ್ಲಿ134 ಕಾಮಗಾರಿಗೆ ಟೆಂಡರ್ ಕರೆದಿದೆ.  ಇಷ್ಟು ತಿಂಗಳಾದರೂ ವರ್ಕ್ ಆರ್ಡ್ ರ್  ಕೊಡುತ್ತಿಲ್ಲ ಎಂದು   ಸೂಪರಿಂಟೆಂಡೆಂಟ್ ಇಂಜಿನೀಯರ್ ನ್ನು ಪ್ರಶ್ನಿಸಿದರು.  ಸರಿಯಾಗಿ ಕೆಲಸ ಮಾಡದಿದ್ದರೆ  ಅನಾನತ್  ಮಾಡುವುದಾಗಿ ಹೇಳಿದ ಮೇಲೆ 10 ದಿನದಲ್ಲಿ ಮಾಡಲಿದೆಂದು ಹೇಳಿದರು.
35 ಲಕ್ಷ ಬೋರ್ ವೆಲ್ ಗೆ ಸಂಬಂಧಿಸಿದ ಹಣ ಬಾಕಿ ಯಾಕೆ ಇದೆ ಖರ್ಚು ಮಾಡಿ. ನಿಮ್ಮ ಅಕೌಂಟಿನಲ್ಲಿ ಇಟ್ಟುಕೊಂಡು ಏನು ಮಾಡ್ತೀರಾ ಎಂದರು ಸಚಿವರು.
ನಗರದಲ್ಲಿ  ಪಾರ್ಕ್ ಮತ್ತು ಐದು ಕೆರೆಗಳ ಜಲ ಸಂಪನ್ಮೂಲ ಅಭಿವೃದ್ಧಿಗೆ 25 ಕೋಟಿ ರೂ ಹಣ ಇದೆ. ಇನ್ನೂ ಒಂದು ಮಾತ್ರ ಡಿಪಿಆರ್ ಆಗಿದೆ ಉಳಿದಿದ್ದು ಬಾಕಿ ಏಕೆ ಎಂದರು. 
ಸರಿಯಾದ ದಾಖಲಾತಿ ಇಲ್ಲದ ಕಾರಣ
1087 ಜನ ಖಾತಾ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದಾಗ ಪಕ್ಕದಲ್ಲಿದ್ದ ನಾಗೇಂದ್ರ ಅವರಿಗೆ ಮಾಮಾ ನಾನೇ ಈ ಖಾತಾ ವ್ಯವಸ್ಥೆ ಮಾಡಿದ್ದು. ದಾಖಲೆ ನೀಡಲಿಲ್ಲ ಎಂದು ಬಿಡಬೇಡಿ ಜನರಿಂದ ದಾಖಲೆ ಪಡೆದು ಮಾಡಬೇಕು ಎಂದರು.
ಕಳೆದ ವರ್ಷ 55 ಕೋಟಿ ರೂ ಬೇಡಿಕೆ ಇತ್ತು. ಈ ವರ್ಷ
63 ಕೋಟಿ ಬೇಡಿಕೆ ಇದೆ ಎಮನದಾಗ ಸಿಟ್ಟಿಗೆ ಬಂದ ಸಚಿವರು ಏನ್ರೀ ಬಿ.ಖಾತಾ ಮಾಡಿದ ಮೇಲೂ ಕೇವಲ ಎಂಟು ಕೋಟಿ ಅಷ್ಟೇ ಹೆಚ್ಚು ಏನ್ರೀ  ನಿಮ್ಮ ಲೆಕ್ಕ ಸರಿ‌ಇಲ್ಲ ಎಂದರು. ಆಗ ಎದ್ದು ಮಾಜಿ ಆಯುಕ್ತ ಕಲೀಲ್ 15 ಕೋಟಿ ರೂ ಹೆಚ್ಚಾಗಿದೆಂದರು.
ನಿಮ್ಮ ಬಳ್ಳಾರಿ ಮಹಾನಗರ ಪಾಲಿಕೆ ಶ್ರೀಮಂತವಾದುದು. ಪ್ರತಿ ವರ್ಷ ತೆರಿಗೆ ಹೆಚ್ಚು ಮಾಡಿ. ವಾಣಿಜ್ಯ ಕಟ್ಟಡಗಲಕ ತೆರಿಗೆ ಬಾಕಿ ವಸೂಲಿ ಮಾಡಿ, ತೆರಿಗೆ ನಾವೇನು ತೆಗೆದುಕೊಳ್ಳುವುದಿಲ್ಲ. ನಿಮ್ಮ ನಗರದ ಅಭಿವೃದ್ಧಿಗೆ ಬರುತ್ತೆ ಎಂದ ಸಚಿವರು ಡೆವಲಪರ್ಸ್ ಪರ ನಿಲ್ಲ ಬೇಡಿ, ಸರಿಯಾಗಿ ನಿಯಮದ ಪ್ರಕಾರ ಅನುಮತಿ‌ ನೀಡಿ ಎಂದರು. ಆಗ ಆಯುಕ್ತ ಪಿ.ಎಸ್.ಮಂಜುನಾಥ ಅವರು ಪಾಲಿಕೆಯಲ್ಲಿ 223 ಸಿಬ್ಬಂದಿ ಕೊರತೆ ಇದೆ ಎಂದು ಸಚಿವರ ಗಮನಕ್ಕೆ ತಂದರು.
ಪಾಲಿಕೆಯ ಲಾಯರ್ ಗಳು ಅಡ್ಜಸ್ಟ್ ಮೆಂಟ್ ಇರುವವರು ಬೇಡ. ಸರಿಯಾಗಿ ಇರುವವರನ್ನು ತೆಗೆದುಕೊಳ್ಳಿ ಎಂದು ಸೂಚಿಸಿದರು ಈ ವೇಳೆ ಲೀಗಲ್ ಸೆಲ್ ಸ್ಟ್ರಾಂಗ್ ಮಾಡಿ ಎಂದು ಶಾಸಕ ನಾಗೇಂದ್ರ ಹೇಳಿದರು.
ನಗರದ ಅಭಿವೃದ್ಧಿಗೆ 200 ಕೋಟಿ ರೂ ಬಿಡುಗಡೆ ಮಾಡಿದೆ. ಅದನ್ನು ಮುಗಿಸಿ ಗುಣ ಮಟ್ಟದ ಕಾಮಗಾರಿ ಮಾಡಿ. ಮತ್ತೆ ಹಣ ಬಿಡುಗಡೆ ಮಾಡಿಸ್ತೀನಿ ಎಂದರು.
ನಗರದ ಕಸ ಸ್ವಚ್ಚತೆಗೆ ಸಿಬ್ಬಂದಿ ಕೊರತೆ ಇದೆ. ಅದಕ್ಕಾಗಿ ಸ್ವೀಪಿಂಗ್ ಮಿಷನ್ ಖರೀದಿ ಮಾಡಿ ಎಂದಾಗ ಅನುದಾನದ ಪ್ರಶ್ನೆ ಬಂದಾಗ, ಡಿಸಿ ನಾಗೇಂದ್ರ ಪ್ರಸಾದ್ ಸಿಎಸ್ ಆರ್ ಫಂಡ್ ನಲ್ಲಿ ಕೊಡಿಸುವುದಾಗಿ ಹೇಳಿದರು.
ಪಾಲಿಕೆ ಸದಸ್ಯರು ಸಣ್ಣ ಪುಟ್ಟ ಕಾಮಗಾರಿಗೂ ಹಣ ನೀಡಲ್ಲ ಎಂದು ದೂರಿದಾಗ. ಏನ್ರೀ ಅವರೇನು ಅವರ ಮನೆ ಕೆಲಸಕ್ಕೆ ಕೇಳ್ತಾರಾ, ನೀವೇನು ನಿಮ್ಮ‌ಮನೆಯಿಂದ ಕೊಡ್ತೀರಾ ಎಂದರು ಸಚಿವರು.
ಸಭೆಯಲ್ಲಿ  ಸಂಸದ ತುಕರಾಂ, ಶಾಸಕರಾದ ಬಿ.ನಾಗೇಂದ್ರ, ಭರತ್ ರೆಡ್ಡಿ, ಡಿಸಿ ನಾಗೇಂದ್ರ ಪ್ರಸಾದ್, ಮೇಯರ್ ಗಾದೆಪ್ಪ, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು ಇದ್ದರು.
ಪಾಲಿಕೆ ಸದಸ್ಯರಲ್ಲದವರು:
ಇವರು ಪಾಲಿಕೆ ಸದಸ್ಯರಲ್ಲ. ಇವರ ಹೆಂಡ್ತಿ, ಮಗಳು, ಸಂಬಂಧಿಕರು ಪಾಲಿಕೆ ಸದಸ್ಯರು, ಅವರು ಬರದೆ, ಸಚಿವರ ಸಭೆಯಲ್ಲಿ ಗಂಡರು ಪಾಲ್ಗೊಂಡು ನಮ್ಮ ವಾರ್ಡಿಗೆ ಹಣ ಕಡಿಮೆ ಕೊಟ್ಟಿದ್ದಾರೆಂದು ಪ್ರಶ್ನಿಸಿದರು.
ಸಚಿವರ ಸಭೆಯೇ ಹೀಗಾದರೆ ಮಹಿಲಕಾ ಮೀಸಲಾತಿಗೇನು ಅರ್ಥ.
ಆಯ್ತು ಕೂಡಿ
ಸಭೆ ಆರಂಭಕ್ಕೆ ಮುನ್ನ ಸಚಿವರು ಮಾಧ್ಯಮದವರು ಹೊರಗೆ ಹೋಗಿ ಎಂದರು. ಇದಕ್ಕೆ ಮಾಧ್ಯಮದವರು ಕಾಂಗ್ರೆಸ್ ಕಾರ್ಯಕರ್ತರು ಇರಬಹುದಾದರೆ ಪತ್ರಕರ್ತರು ಇರುವುದು ತಪ್ಪೇ ಎಂದು ಪ್ರಶ್ನೆ ಮಾಡಿದ ಮೇಲೆ ಆಯ್ತು ಕೂಡಿ ಎಂದು ಸಮ್ಮತಿಸಿದರು.