Home ಜಿಲ್ಲೆ ಬಳ್ಳಾರಿ ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ವಿಫಲ: ದತ್ತಾತ್ರ್ರಿ

ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ವಿಫಲ: ದತ್ತಾತ್ರ್ರಿ

oplus_6291456

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.10: ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಅದಕ್ಕಾಗಿ ಈ ಬಾರಿ  ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಉತ್ತಮ  ಬಜೆಟ್ ನೀಡಲು ವಿಫಲರಾಗಿದ್ದಾರೆಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ  ಸಂಯೋಜಕ ಎಸ್. ದತ್ತಾತ್ರಿ  ಹೇಳಿದ್ದಾರೆ.

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ರಾಜ್ಯ ಸರ್ಕಾರ ಸಾಕಷ್ಟು ಸಾಲ ಮಾಡಿದೆ. ಆದರೆ ಗುತ್ತಿಗೆದಾರರ ಬಾಕಿ ಮಾತ್ರ ನೀಡುತ್ತಿಲ್ಲ. ಸಾಲದಿಂದ ಏನು ಮಾಡಿದ್ದಾರೆ ಎಂಬುದೇ ಆರ್ಥವಾಗುತ್ತಿಲ್ಲ ಎಂದರು.

ಬಿಜೆಪಿಯ ಕಾರ್ಮಿಕ ಪ್ರಕೋಷ್ಟದ ರಾಜ್ಯ ಕಾರ್ಯಕಾರಿಣಿ ಸಭೆ ಇಂದು ನಗರದಲ್ಲಿ ಮಾಡಲಾಗುತ್ತಿದೆ. ಪಕ್ಷದಲ್ಲಿ 24 ಪ್ರಕೋಷ್ಟಗಳಿವೆ. ಇವುಗಳ ಮೂಲಕ ಜನರ ಬಳಿ ಹೋಗಿ ಪಕ್ಷದ ಸರ್ಕಾರಗಳ ಯೋಜನೆಗಳ ಬಗ್ಗೆ ತಿಳಿಸುತ್ತಿದೆ.

ಕಾನೂನು ಪ್ರಕೋಷ್ಟದ ಮೂಲಕ ಕಾನೂನುಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ. ಹೀಗೆ ಹಲವಾರು ಸಹಕಾರ, ಮೀನುಗಾರಿಕೆ, ವೈದ್ಯಕೀಯ  ಪ್ರಕೋಷ್ಟಗಳಿವೆ. ಅಸಂಘಟಿತ ಕಾರ್ಮಿಕರನ್ನು ಒಗ್ಗೂಡಿಸಲು ಅಸಂಘಟಿತ ಕಾರ್ಮಿಕ ಪ್ರಕೋಷ್ಟ ಕೆಲಸ ಮಾಡುತ್ತಿದೆಂದರು.