ಹಗಲು ವೇಳೆ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ. ಫೆ.05:
ತಾಲ್ಲೂಕಿನ ಕುಂತೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲು ವೇಳೆ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ ಕಚೇರಿ ಮುಂಭಾಗದಲ್ಲಿ ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಕುಂತೂರು ಭಾಗದ ಜಮೀನುಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡುವುದ್ದರಿಂದ ರೈತರು ಜಮೀನಿಗೆ ತೆರಳಿ ಕೃಷಿ ಚಟುವಟಿಕೆಗಳನ್ನು ನಡೆಸಲು ಕಾಡು ಪ್ರಾಣಿಗಳು ತೊಂದರೆಯಾಗುತ್ತಿದೆ. ಆದ್ದರಿಂದ ಬೆಳಗಿನ ಸಮಯದಲ್ಲಿ ವಿದ್ಯುತ್ ಕೊಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.


ಸ್ಥಳಕ್ಕೆ ಸೆಸ್ಕ್ ಕಾರ್ಯಪಾಲಕರು ಅಭಿಯಂತರರು ತಬಸ್ಸುಮ್ ಆಗಮಿಸಿದ್ದ, ಬಳ್ಳಾರಿ ಹೆಚ್ಚುವರಿ ವಿದ್ಯುತ್ ತರಲು ಹೆವಿ ಲೈನ್ ಮಾಡುವುದ್ದರಿಮದ ರಾತ್ರಿ ಕೊಡಲಾಗುತ್ತಿದೆ. ಫೆ. 12 ರ ನಂತರ ಬೆಳಗಿನ ಸಮಯದಲ್ಲಿ ಏಳು ಗಂಟೆ ವಿದ್ಯುತ್ ನೀಡುವುದಾಗಿ ಭರವಸೆ ನೀಡುವುದಾಗಿ ಹೇಳಿದ್ದ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟು ತೆರಳಿದರು. ಈವೇಳೆ ಎಇಇ ರಾಜು ಇದ್ದರು.
ಪ್ರತಿಭಟನೆಯಲ್ಲಿ ಕುಂತೂರು ನಂಜುಂಡಸ್ವಾಮಿ, ಗಿರೀಶ್ ಆಲಹಳ್ಳಿ, ತೋಟದಾರ್ಯ ತೇರಂಬಳ್ಳಿ, ಲೋಕೇಶ್, ರೇಚಣ್ಣ, ಸತೀಶ್, ಗುರುಪಾದಸ್ವಾಮಿ ತೇರಂಬಳ್ಳಿ, ಮಹೇಶ್, ಕುಂತೂರು ಮಲ್ಲಿಕಾರ್ಜುನ, ನಿರಂಜನಮೂರ್ತಿ, ಬಾಬು, ನಾಗೇಶ್, ಅಂಗಡಿ ರವಿ ಹಾಗೂ ಇತರರು ಇದ್ದರು.